ಕಾರ್ಡ್ ತಿದ್ದುಪಡಿಗೆ ಬೇಡಿಕೆ
ಗೃಹಲಕ್ಷ್ಮಿ ಯೋಜನೆ ಬಳಿಕ ಹೊಸ ಪಡಿತರ ಕಾರ್ಡ್‌ಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಕುಟುಂಬಗಳು ಪ್ರತ್ಯೇಕಗೊಂಡು ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮದುವೆ ಹಾಗೂ ಮರಣದ ಬಳಿಕ ತಿದ್ದುಪಡಿ ಪ್ರಮಾಣವೂ ಹೆಚ್ಚಿದೆ. 6 ವರ್ಷ ಮೇಲ್ಪಟ್ಟವರ ಹೆಸರು ಸೇರ್ಪಡೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ. ಪಿಎಂ ಕಿಸಾನ್ ಯೋಜನೆಯಡಿ ಏಕ ಕುಟುಂಬದಲ್ಲಿ ಒಬ್ಬರಿಗಷ್ಟೇ ಸಹಾಯಧನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ದ್ವಿಕುಟುಂಬಗಳಾಗಲು ರೇಷನ್ ಕಾರ್ಡ್‌ಗಳಿಗೆ ಹೆಚ್ಚಿನ ಬೇಡಿಕೆ ಶುರುವಾಗಿದೆ.