ಕಾರವಾರ: ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿವೆ. ಇದಕ್ಕೆ ಹೊರ ಊರುಗಳಿಂದ ಬಂದವರೇ ಕಾರಣ ಎಂಬುದು ಸಾಮಾನ್ಯವಾದ ಆರೋಪ. ಆದರೆ, ರೋಗ ಲಕ್ಷಣ ಇರುವವರು ಮತ್ತು ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೇ ಗುರಿಯಾಗಿ ಪರೀಕ್ಷೆ ಮಾಡಲಾಗುತ್ತಿದೆ. ಹಾಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರತಿಕ್ರಿಯೆ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಏ.27ರ ರಾತ್ರಿ 9ರಿಂದ ಕರ್ಫ್ಯೂ ಜಾರಿಯಲ್ಲಿದೆ. ಹಾಗಾಗಿ ಜನರು ಸಂಚಾರದಲ್ಲಿ ನಿಯಂತ್ರಣವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕಿತ್ತು. ಆದರೆ, ಹಾಗಾಗದೇ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ದಿನವೊಂದಕ್ಕೆ ಸುಮಾರು ಒಂದು ಸಾವಿರದ ಸಮೀಪದಲ್ಲಿ ದೃಢಪಟ್ಟ ಪ್ರಕರಣಗಳು ವರದಿಯಾಗುತ್ತಿವೆ. ಇದು ಜನಸಾಮಾನ್ಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ, ‘ಈ ಮೊದಲು ದಿನವೊಂದಕ್ಕೆ 2 ಸಾವಿರದಿಂದ 2,500ರವರೆಗೆ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಅವುಗಳಲ್ಲಿ ಸಾಮಾನ್ಯ ಮಾದರಿಗಳೇ ಒಂದು ಸಾವಿರದಷ್ಟು ಇರುತ್ತಿದ್ದವು. ಪ್ರಯೋಗಾಲಯದಲ್ಲಿ ಕೇವಲ ಪರೀಕ್ಷೆಗಳು ನಡೆಯುತ್ತಿದ್ದವೇ ವಿನಾ ನಿಜವಾದ ಸೋಂಕಿತರ ಪತ್ತೆಗೆ ಹಿನ್ನಡೆಯಾಗುತ್ತಿತ್ತು. ಈಗ ಈ ಪದ್ಧತಿಯನ್ನು ಬದಲಾಯಿಸಲು ಇಲಾಖೆಯಿಂದ ಸೂಚನೆ ಬಂದಿದೆ’ ಎಂದು ವಿವರಿಸಿದರು.

‘ಬದಲಾದ ನಿಯಮದಂತೆ, ಕೇವಲ ರೋಗ ಲಕ್ಷಣ ಇರುವವರು ಮತ್ತು ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಗಂಟಲು ದ್ರವದ ಮಾದರಿಗಳನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರು ಇರುವ ಮನೆಯವರು, ಐ.ಎಲ್.ಐ, ಎಸ್.ಎ.ಆರ್.ಐ, ಜ್ವರ ಮುಂತಾದ ಲಕ್ಷಣಗಳು ಇರುವವರ ಗಂಟಲು ದ್ರವದ ಮಾದರಿಗಳನ್ನು ಹೆಚ್ಚು ಪರೀಕ್ಷೆ ಮಾಡಲಾಗುತ್ತಿದೆ. ನಿರ್ದಿಷ್ಟವಾಗಿ ಅವರನ್ನೇ ಗುರಿಯಾಗಿ ಪರೀಕ್ಷೆ ಮಾಡುವುದರಿಂದ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆಯಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಕರ್ಫ್ಯೂ ಕಾರಣದಿಂದ ರಾಜ್ಯದ ಬೇರೆ ನಗರಗಳಿಂದ ತಮ್ಮ ಊರುಗಳಿಗೆ ಜನರು ಸಂಚರಿಸಿದ್ದಾರೆ. ಹಾಗಾಗಿ ಮೂರು ದಿನ ಹೆಚ್ಚು ಪ್ರಕರಣಗಳು ವರದಿಯಾಗಬಹುದು ಎಂಬ ಸೂಚನೆಗಳೂ ಇದ್ದವು’ ಎಂದು ತಿಳಿಸಿದರು.

‘ಅವರೇ ಕಾರಣರಲ್ಲ’

‘ಹೊರ ರಾಜ್ಯಗಳು, ಜಿಲ್ಲೆಗಳಿಂದ ಬಂದವರಿಗೆ ಸ್ವಯಂ ಐಸೋಲೇಷನ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮತ್ತು ಜಿಲ್ಲಾಧಿಕಾರಿ ಕೂಡ ತಿಳಿಸಿದ್ದಾರೆ. ಹಲವರು ಇದನ್ನು ಸೂಚಿಸುತ್ತಿದ್ದಾರೆ. ಕೇವಲ ಬೆಂಗಳೂರಿನಿಂದ ಬಂದವರಿಂದಲೇ ಸೋಂಕು ಹರಡುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಡಾ.ಶರದ್ ನಾಯಕ ತಿಳಿಸಿದರು.

ಜಿಲ್ಲೆಯಲ್ಲಿ 10 ದಿನಗಳಲ್ಲಿ ಕೋವಿಡ್

6,237

ಒಟ್ಟು ಸೋಂಕಿತರು

2,288

ಒಟ್ಟು ಗುಣಮುಖರಾದವರು

57

ಒಟ್ಟು ಮೃತಪಟ್ಟವರು

* ಏ.26ರಿಂದ ಮೇ 5ರವರೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.