ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಏಳು ಸಾವಿರ ಮಂದಿ ತಪಾಸಣೆ

ಜಿಲ್ಲೆಯಲ್ಲಿ ವೈರಾಣು ಸೋಂಕಿನ ಆತಂಕವಿಲ್ಲ: ಜಿ.ಪಂ ರೋಶನ್
Last Updated 9 ಮಾರ್ಚ್ 2020, 13:56 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ಕೋವಿಡ್ 19 ವೈರಾಣು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 37ಕ್ಕೂ ಹೆಚ್ಚು ತಂಡಗಳಿಂದ ವಿವಿಧೆಡೆ ತಪಾಸಣೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಹೇಳಿದರು.

ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದೇವೆ.ವಿದೇಶಿ ಪ್ರವಾಸಿಗರು ಹೆಚ್ಚು ಬರುವ ಗೋಕರ್ಣ ಹಾಗೂ ಮುಂಡಗೋಡಿನ ಟಿಬೆಟನ್ಕಾಲೊನಿಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇಲ್ಲಿ 5ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಪ್ರತಿ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದುಸಾವಿರಕ್ಕೂ ಹೆಚ್ಚು ಎನ್–95ಮುಖಗವಸುಕೊಡಲಿದ್ದೇವೆ. 10 ಸಾವಿರಕ್ಕೂ ಹೆಚ್ಚು ಮೂರುಪದರಗಳುಇರುವ ಮುಖಗವಸು ವಿತರಣೆಯಾಗಲಿವೆ. ತುರ್ತು ಪರಿಸ್ಥಿತಿಗೆ ಅನುಕೂಲ ಆಗುವಂತೆ ನೌಕಾನೆಲೆಯವರು100 ಹಾಸಿಗೆಗಳನ್ನು ಜಿಲ್ಲಾಆಸ್ಪತ್ರೆಗೆ ನೀಡಲಿದ್ದಾರೆ.ಆರೋಗ್ಯ ಇಲಾಖೆಯು ಅಗತ್ಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದ್ದು,ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಾರ್ವಜನಿಕರು ಆತಂಕ ಪಡಬೇಕಿಲ್ಲ’ ಎಂದರು.

ಮಂಗನ ಕಾಯಿಲೆಗೆ ಲಸಿಕೆ

‘ಮಂಗನ ಕಾಯಿಲೆ ತಡೆಗಟ್ಟಲುವಿವಿಧ ಇಲಾಖೆಗಳ ಸಮನ್ವಯದಿಂದ ಲಸಿಕೆ ಹಾಕಿಸಲಾಗುತ್ತಿದೆ. ಮೂರು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಲಸಿಕೆ ಹಾಕಲಾಗಿದೆ. ಮಾರ್ಚ್ ಅಂತ್ಯದ ಒಳಗೆ ಇನ್ನೂ 5 ಸಾವಿರ ಲಸಿಕೆ ಹಾಕುವ ಗುರಿಯಿದೆ.48 ಸಾವಿರ ಡಿ.ಪಿ.ಎಂ ತೈಲದ ಬಾಟಲಿಗಳನ್ನುವಿತರಣೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

ಪ್ರವಾಸಿಗರ ಸಂಖ್ಯೆ ಇಳಿಮುಖ

‘ಜಿಲ್ಲೆಯ ಪ್ರವಾಸೋದ್ಯಮದ ಮೇಲೆಯೂ ಕೋವಿಡ್ 19 ವೈರಸ್ ಪರಿಣಾಮ ಬೀರಿದೆ.15 ದಿನಗಳಿಂದ ಗೋಕರ್ಣ, ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಇದು ಟ್ಯಾಕ್ಸಿ, ರಿಕ್ಷಾ ಚಾಲಕರು, ಹೋಟೆಲ್, ರೆಸಾರ್ಟ್ ಮಾಲೀಕರ ವ್ಯವಹಾರಕ್ಕೆ ತೊಡಕಾಗಿದೆ’ ಎಂದು ಬೇಸರಿಸುತ್ತಾರೆ ಪ್ರವಾಸಿ ಟ್ಯಾಕ್ಸಿ ಚಾಲಕ ಮಂಜುನಾಥ.

ಸೊಳ್ಳೆ ಮುಕ್ತ ಕಾರವಾರ

‘ಕಾರವಾರದಲ್ಲಿ ಎರಡು ವರ್ಷಗಳಿಂದ ಸೊಳ್ಳೆಗಳು ವಿಪರೀತವಾಗಿವೆ. ನಗರ ಪ್ರದೇಶಗಳಲ್ಲಿ ಈ ಹಿಂದೆ ಅವುಗಳ ಪ್ರಮಾಣ ಬಹಳಷ್ಟು ಕಡಿಮೆಯಿತ್ತು. ಆದರೆ, ಈಗ ಅಂಕೋಲಾದಿಂದ ಕಾರವಾರದವರೆಗೆ ಭಾರಿಹೆಚ್ಚಳ ಕಂಡಿವೆ. ಹಾಗಾಗಿ ಸೊಳ್ಳೆ ಮುಕ್ತ ನಗರವನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಮೊಹಮ್ಮದ್ ರೋಶನ್ ಹೇಳಿದರು.

‘ನಗರದಲ್ಲಿ ನೀರು ನಿಲ್ಲುವ ಸ್ಥಳವನ್ನು ಗುರುತು ಮಾಡುತ್ತೇವೆ. ಇದಕ್ಕಾಗಿ ವಿಶೇಷ ತಂಡವನ್ನು ರಚಿಸುತ್ತೇವೆ. ಶೀಘ್ರದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT