ಕಾರವಾರ: ಇಲ್ಲಿನ ಬಾಡದ ಶಿವಾಜಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಥ್ರೋಬಾಲ್ ಪಂದ್ಯಾವಳಿ ಸೋಮವಾರ ಮುಕ್ತಾಯಗೊಂಡಿತು.

ಬಾಲಕ ಮತ್ತು ಬಾಲಕಿಯರ ವಿಭಾಗದ ಫೈನಲ್ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ತುರುಸಿನಿಂದ ನಡೆದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಮೈಸೂರು ತಂಡ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಪ್ರಶಸ್ತಿಗೆ ಮುತ್ತಿಕ್ಕಿದವು.

33 ಶೈಕ್ಷಣಿಕ ಜಿಲ್ಲೆಗಳಿಂದ 64 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಉತ್ತರ ಕನ್ನಡದ ಬಾಲಕರ ತಂಡವು ಮೊದಲ ಸುತ್ತಿನಲ್ಲಿ, ಬಾಲಕಿಯರ ತಂಡವು ಎರಡನೇ ಸುತ್ತಿನಲ್ಲಿ ಹೊರಬಿದ್ದವು. ಆದರೆ, ಎರಡೂ ವಿಭಾಗಗಳಲ್ಲೂ ಸಮತೋಲಿತ ಪ್ರದರ್ಶನ ನೀಡಿದ ಮೈಸೂರು ಮತ್ತು ದಕ್ಷಿಣ ಕನ್ನಡ ತಂಡಗಳು ಪ್ರಶಸ್ತಿಗೆ ಸೆಣಸಾಟ ನಡೆಸಿದ್ದವು.

ಅಂತಿಮ ಪಂದ್ಯದಲ್ಲಿ ಮೈಸೂರು ಬಾಲಕರ ತಂಡವು ದಕ್ಷಿಣ ಕನ್ನಡ ತಂಡವನ್ನು 24–26, 25–23, 15–12 ಸೆಟ್ಗಳಿಂದ ಸೋಲುಣಿಸಿತು. ದಕ್ಷಿಣ ಕನ್ನಡ ಬಾಲಕಿಯರ ತಂಡವು ಮೈಸೂರು ತಂಡವನ್ನು 25–21, 15–25, 15–13 ಸೆಟ್ಗಳಿಂದ ಪರಾಭವಗೊಳಿಸಿತು.

ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 875 ಕ್ರೀಡಾಪಟುಗಳು ಪಾಲ್ಗೊಂಡು ಪ್ರದರ್ಶನ ನೀಡಿದರು. ತರಬೇತುದಾರರು, ತಂಡದ ವ್ಯವಸ್ಥಾಪಕರು ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಪ್ರೀಮಿಯರ್ ಪದವಿ ಪೂರ್ವ ಕಾಲೇಜು, ಅಮ್ಮುರಬಿ ಪದವಿ ಪೂರ್ವ ಕಾಲೇಜು, ಶಿವಾಜಿ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕ್ರೀಡಾಕೂಟಕ್ಕೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಚಾಲನೆ ನೀಡಿದ್ದರು. ಸಮಾರೋಪ ಸಮಾರಂಭದಲ್ಲಿ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಟಿ.ಸಿ ಟ್ರೋಫಿ ವಿತರಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ ನಾಯ್ಕ, ಜಿ.ಡಿ.ಮನೋಜೆ, ರಮೇಶ ಪತ್ರೇಕರ, ಡಿ.ಆರ್.ನಾಯ್ಕ, ಪ್ರಕಾಶ ಮೇಥಾ, ಪ್ರಕಾಶ ರಾಣೆ, ಪ್ರಶಾಂತ ರಾಣೆ, ಕಿರಣ ನಾಯ್ಕ, ಸಂಜಯ ಗೌಡಾ, ಎ.ಸಿ.ಗಾಂವಕರ, ಹರೀಶ ನಾಯಕ, ಶ್ರೀದೇವಿ ನಾಯ್ಕ, ಪಿಂಕಿ, ರಾಘವೇಂದ್ರ ನಾಯ್ಕ, ರಾಜೇಶ ಸೈಲ್, ಇತರರು ಪಾಲ್ಗೊಂಡಿದ್ದರು.

33 ಜಿಲ್ಲೆಗಳ 64 ತಂಡ ಭಾಗಿ 875 ಕ್ರೀಡಾಪಟುಗಳಿಂದ ಪ್ರದರ್ಶನ ದಕ್ಷಿಣ ಕನ್ನಡ, ಮೈಸೂರು ತಂಡದ ನಡುವೆ ಎರಡೂ ವಿಭಾಗದಲ್ಲೂ ಪೈಪೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.