ಹವಾನಿಯಂತ್ರಕ ವ್ಯವಸ್ಥೆ ಬೆಳಕಿನ ವ್ಯವಸ್ಥೆಗೆ ನೀಡಲಾದ ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂನಿಂದ ಸುರಕ್ಷತಾ ಪ್ರಮಾಣ ಪತ್ರ ಲಭಿಸುವುದು ಬಾಕಿ ಇದೆ. ಒಂದೆರಡು ದಿನದೊಳಗೆ ಪತ್ರ ಸಿಗಲಿದ್ದು ಆ ಬಳಿಕ ಸಾರ್ವಜನಿಕ ಯುದ್ಧ ವಿಮಾನ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ
ಮಂಜುನಾಥ ನಾವಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ
ವಿಮಾನಕ್ಕೆ ಮೆತ್ತಿದ ಕೆಸರು
ಬಿಸಿಲಿಗೆ ಹೊಳೆಯುತ್ತಿದ್ದ ಟುಪಲೇವ್ ಯುದ್ಧ ವಿಮಾನದ ಮೇಲ್ಮೈ ಈಗ ಕೆಂಬಣ್ಣಕ್ಕೆ ತಿರುಗಿದೆ. ಧೂಳು ಈಚೆಗೆ ಸುರಿದ ಮಳೆಯಿಂದ ಮೆತ್ತಿದ ಕೆಸರು ಇದಕ್ಕೆ ಕಾರಣವಾಗಿದೆ. 56 ಮೀಟರ್‌ನಷ್ಟು ಉದ್ದ 34 ಮೀಟರ್‌ದಷ್ಟು ಅಗಲವಿರುವ ಯುದ್ಧ ವಿಮಾನ ಶುಚಿಗೊಳಿಸುವುದು ಸಿಬ್ಬಂದಿಗೆ ಸವಾಲಾಗಿದೆ. ವಿಮಾನದ ಮೇಲ್ಮೈ ಪೂರ್ತಿಯಾಗಿ ತೊಳೆಯಲು ಪೂರಕವಾದ ಯಂತ್ರದ ಲಭ್ಯತೆ ಇಲ್ಲ ಎಂಬುದಾಗಿ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹೇಳುತ್ತಾರೆ. ‘ವಿಮಾನದ ಮೇಲ್ಮೈ ಶುಚಿಗೊಳಿಸುವ ಅಗತ್ಯ ಯಂತ್ರವನ್ನು ಸದ್ಯದಲ್ಲಿಯೇ ಒದಗಿಸಲಾಗುತ್ತದೆ’ ಎಂದು ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ ಭರವಸೆ ನೀಡಿದ್ದಾರೆ.