ಸಿಆರ್‌ಝಡ್ ಅನುಮತಿಗೆ ಇನ್ನಷ್ಟೆ ಅರ್ಜಿ!
‘ಟುಪಲೇವ್ ಯುದ್ಧವಿಮಾನ ಮ್ಯೂಸಿಯಂ ಉದ್ಯಾನದ ಅಭಿವೃದ್ಧಿಗೆ ಹಲವು ಸೌಕರ್ಯಗಳ ಅಳವಡಿಕೆಗೆ ₹2 ಕೋಟಿ ಅನುದಾನ ಮಂಜೂರಾಗಿದೆ. ನಿರ್ಮಿತಿ ಕೇಂದ್ರವು ಸೌಕರ್ಯಗಳ ಅಳವಡಿಕೆ ಜವಾಬ್ದಾರಿ ಹೊತ್ತಿದ್ದು ಈಗಾಗಲೆ ವಿಮಾನ ಅಳವಡಿಕೆಗೆ ನೆಲಗಟ್ಟು ನಿರ್ಮಿಸಿದೆ. ಇನ್ನಷ್ಟು ಸೌಕರ್ಯಗಳ ಅಳವಡಿಕೆ ಕೆಫೆಟೇರಿಯಾ ನಿರ್ಮಾಣ ನಡೆಯಬೇಕಿದ್ದು ಸಿಆರ್‌ಝಡ್ ಅನುಮತಿ ಅಗತ್ಯವಿರುವ ಕಾರಣ ಕೆಲಸ ನಿಂತಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಸಿಆರ್‌ಝಡ್ ಅನುಮತಿಗೆ ಅರ್ಜಿ ಸಲ್ಲಿಸುವುದಾಗಿ ನಿರ್ಮಿತಿ ಕೇಂದ್ರದವರು ತಿಳಿಸಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆ ಪನಿರ್ದೇಶಕ ಮಂಜುನಾಥ ನಾವಿ ತಿಳಿಸಿದರು.