ದಾಂಡೇಲಿ: ಉತ್ತರ ಕನ್ನಡ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ದಾಂಡೇಲಿ ನಗರದ ಹಳೆ ನಗರ ಸಭೆ ಮೈದಾನದಲ್ಲಿ ಡಿಸೆಂಬರ್ 13,14,15 ರಂದು ನಡೆಯಲಿದೆ.

ದಾಂಡೇಲಿ ತಹಶೀಲ್ದಾರ ಶೈಲೇಶ ಪರಮಾನಂದ, ಹಳಿಯಾಳ ತಹಶೀಲ್ದಾರ ಸೋಮನಕಟ್ಟೆ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಸೌದಧ ಸಭಾ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕರಾದ ಆರ್.ವಿ.ದೇಶಪಾಂಡೆ ಅವರನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಗೌರವ ಉಪಾಧ್ಯಕ್ಷರಾಗಿ ಹಳಿಯಾಳ ತಹಶೀಲ್ದಾರ್ ಸೋಮನಕಟ್ಟೆ ಮತ್ತು ಇನ್ನಿತರ ಅಧಿಕಾರಿಗಳ ನೇಮಿಸಲಾಯಿತು.

ಸಂಘಟನಾ ಕಾರ್ಯದರ್ಶಿಯಾಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೋಹನ್ ಹಲವಾಯಿ ಮತ್ತು ಬಿಜೆಪಿ ಮಂಡಲದ ಅಧ್ಯಕ್ಷ ಬದುವಂತಗೌಡ ಪಾಟೀಲ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸಂದೇಶ್ ಜೈನ, ವೇದಕೆ ನಿರ್ವಹಣಾ ಸಮಿತಿ, ಮೆರವಣಿಗೆ ನಿರ್ವಹಣಾ ಸಮಿತಿ, ಹಣಕಾಸು ಸಮಿತಿ, ಸಾಂಸ್ಕೃತಿಕ ಸಮಿತಿಗೆ ಅಧ್ಯಕ್ಷರುಗಳನ್ನು ನೇಮಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಜಿಲ್ಲಾ ಸಮ್ಮೇಳನ ಆಗಿರುವ ಕಾರಣ ರಾಜ್ಯ ಮತ್ತು ಜಿಲ್ಲೆಯ ಇನ್ನಿತರ ಸ್ಥಳಗಳಿಂದ ಬರುವ ಗಣ್ಯರಿಗೆ ಉಳಿದುಕೊಳ್ಳಲು ವಸತಿ ನಿಲಯಗಳ ಕೊಠಡಿಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಲಾಗುತ್ತದೆ ಎಂದರು.

ಮೈದಾನದಲ್ಲಿ ಸಮ್ಮೇಳನ ನಡೆಯಲಿರುವ ಕಾರಣ ಪಾರ್ಕಿಂಗ್ ಸಮಸ್ಯೆ ನಿರ್ವಹಣೆಗೆ ಪೊಲೀಸ್ ಇಲಾಖೆ ಸಹಕಾರ ಕೋರಿದರು.ಕಾಲೇಜು ವಿದ್ಯಾರ್ಥಿಗಳನ್ನು ಸಮ್ಮೇಳನಕ್ಕೆ ಕರೆತರುವ ಕ್ರಮವಾಗಬೇಕೆಂದು ಕೋರಿದರು.

ತಹಶೀಲ್ದಾರ್ ಶೈಲೇಶ್ ಪರಮಾನಂದ ಮಾತನಾಡಿ, 25ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಐತಿಹಾಸಿಕ ಸಮ್ಮೇಳನವಾಗಿ ರೂಪಿಸಲು ಎಲ್ಲ ಇಲಾಖೆ ಅಧಿಕಾರಿಗಳು ತನು ಮನ ಧನದಿಂದ ಸಹಾಕಾರ ಕೊಟ್ಟು ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.

ಹಳಿಯಾಳ ತಹಶೀಲ್ದಾರ್ ಸೋಮನಕಟ್ಟೆ ಮಾತನಾಡಿ, ಸಾಹಿತ್ಯಾಸಕ್ತರಲ್ಲಿ ನಾನು ಕೂಡ ಒಬ್ಬನು, ನಮ್ಮಲ್ಲಿಯೇ ಸಮ್ಮೇಳನ ನಡೆಯುತ್ತಿರುವುದಕ್ಕೆ ಹೆಮ್ಮೆ ಇದೆ ಎಲ್ಲರೂ ಸಹಕಾರ ನೀಡಿ ಎಂದರು.

ದಾಂಡೇಲಿ ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ದಾಂಡೇಲಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ.ಹಾಮಮನಿ, ವಿಲಾಸ ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಪೌರಾಯುಕ್ತ ವಿವೇಕ ಬನ್ನೆ, ಎ.ಸಿ.ಎಫ್ ಸಂತೋಷ ಚವ್ಹಾಣ ಮಾತನಾಡದರು.

ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪಿ.ಐ ಮಾನೆ, ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ದೀಪಕ್ ನಾಯಕ, ಪಿಎಸ್ಐಗಳಾದ ಅಮೀನ್ ಸಾಬ್ ಅತ್ತಾರ್, ಜಗದೀಶ್ ನಾಯ್ಕ್, ಸಿಆರ್ಪಿ ಲಲಿತಾ, ಪೇಪರ್ ಮಿಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ತಿವಾರಿ, ಕೀರ್ತಿ ಗಾಂವಕರ, ಅನೀಲ್ ದಂಡಗಲ, ಅನೀಲ್ ನಾಯಕರ, ಟಿ.ಎಸ್. ಬಾಲಮಣಿ, ಶ್ರೀಮಂತ ಮದರಿ, ಫೀರೋಜ ಪಿರಜಾದೆ, ರವಿ ಸುತಾರ್, ರೇಣುಕಾ ಬಂದಮ, ಭಾಗ್ಯಶ್ರೀ ಮನ್ನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.