ಕಾರವಾರ: ರೋಟರಿ ಕ್ಲಬ್ ಪಶ್ಚಿಮದ ಕಾರವಾರ ಘಟಕ ಆರೋಗ್ಯ ಜಾಗೃತಿಗೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ ವಾಕಥಾನ್ ಸ್ಪರ್ಧೆಯಲ್ಲಿ 560ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡರು.

15 ವರ್ಷ ಒಳಗಿನವರಿಗೆ, 16 ರಿಂದ 35 ವರ್ಷ ವಯೋಮಾನದವರಿಗೆ, 36 ರಿಂದ 59 ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗದಲ್ಲಿ 5 ಕಿ.ಮೀ. ಹಾಗೂ 10 ಕಿ.ಮೀ. ನಡಿಗೆ ಸ್ಪರ್ಧೆ ನಡೆಸಲಾಯಿತು. ಮಾಲಾದೇವಿ ಮೈದಾನದಲ್ಲಿ ನಡಿಗೆ ಸ್ಪರ್ಧೆಗೆ ಚಾಲನೆ ದೊರೆಯಿತು. ಇಲ್ಲಿಂದ ಕಾಜುಬಾಗ, ಕೋಡಿಬಾಗ ಮಾರ್ಗವಾಗಿ ನಂದನಗದ್ದಾ ಟೋಲ್‍ನಾಕಾ ಮೂಲಕ ಬಾಂಡಿಶಿಟ್ಟಾವರೆಗೆ ಮಕ್ಕಳು ನಡೆಯುತ್ತ ಸಾಗಿದರು. ವಯಸ್ಕರು ಬಾಂಡಿಶಿಟ್ಟಾ, ಹಬ್ಬುವಾಡಾ ಮಾರ್ಗವಾಗಿ ಪುನಃ ಮಾಲಾದೇವಿ ಮೈದಾನಕ್ಕೆ ಬಂದು ತಲುಪಿದರು.

ಸ್ಪರ್ಧೆಗೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಆಧುನಿಕ ಜೀವನಶೈಲಿಯಲ್ಲಿ ಹಣ, ಹುದ್ದೆಯ ಗಳಿಕೆಯ ಹಿಂದೆ ಬೀಳುವುದೇ ಧ್ಯೇಯವಾಗುತ್ತಿದೆ. ಅದರ ಬದಲು ಆರೋಗ್ಯ ಗಳಿಕೆಯ ದಾರಿ ಹುಡುಕುವ ಕೆಲಸ ಆಗಬೇಕು. ನಡಿಗೆ, ಓಟ, ಯೋಗ, ವ್ಯಾಯಾಮಗಳು ಆರೋಗ್ಯ ಕಾಯುತ್ತವೆ’ ಎಂದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ ಇದ್ದರು.

ಬಳಿಕ ವಿಜೇತರಿಗೆ ಜಿಲ್ಲಾ ರಂಗಮಂದಿರದ ಎದುರಿನ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ಸೆಂಟ್ ಮಿಲಾಗ್ರಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡಿಸ್, ರೋಟರಿ ಕ್ಲಬ್ ಪಶ್ಚಿಮದ ಕಾರವಾರ ಘಟಕದ ಅಧ್ಯಕ್ಷ ಪ್ರಕಾಶ ರೇವಣಕರ, ಕಾರ್ಯದರ್ಶಿ ಪಲ್ಲವಿ ಡಿಸೋಜಾ, ಸಂಘಟಕರಾದ ಡಾಲ್ರಿಚ್ ಫರ್ನಾಂಡಿಸ್, ಅಕ್ಷಯ ಪಾವಸ್ಕರ, ಜಸ್ಟಿನ್ ಫರ್ನಾಂಡಿಸ್ ಇದ್ದರು.

ವಿಜೇತರು:

ಬಾಲಕರ ವಿಭಾಗ: ಸಂಕೇತ್ ಮೇತ್ರಿ, ಪರಶುರಾಮ ಬೆಳವಟ್ಕರ್. ಬಾಲಕಿಯರ ವಿಭಾಗ: ಮಾಯಾ ತಳೇಕರ್, ಸೃಷ್ಟಿ ನಾಯ್ಕ.

16–35 ವರ್ಷ (ಪುರುಷರು); ಹೇಮಂತಕುಮಾರ ಗೌಡ, ಅಣ್ಣಪ್ಪ ನಾಯ್ಕ. ಮಹಿಳೆಯರು: ಚಂದ್ರಿಕಾ ಗೌಡ, ಸುಮತಿ ಗೌಡ.

36–59 (ಪುರುಷರು); ಪ್ರಭಾಕರ ಗೌಡ, ವಿಶು ತೋಡಕರ್. ಮಹಿಳೆಯರು:ಗೀತಾ ರಮೇಶ್, ಮಂಜು ಸಾಜಿಮೊನ್.

60 ವರ್ಷ ಮೇಲ್ಪಟ್ಟವರು (ಪುರುಷರು); ನರಸಿಂಹ ಕೊಳಂಬಕರ್, ದಿಗಂಬರ ನಾಯ್ಕ. ಮಹಿಳೆಯರು: ರೋಸ್ಲಿನ್ ಫರ್ನಾಂಡಿಸ್, ಡಾ.ಸುಷ್ಮಾ ಅಣ್ವೇಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.