ಅಂಕೋಲಾ: ತಾಲ್ಲೂಕಿನ ಮೊಗಟಾದಲ್ಲಿ ಭಾನುವಾರು ಬಿರುಗಾಳಿ ಬೀಸಿದ್ದರಿಂದ ಮನೆಯೊಂದರ ಚಾವಣಿ ಹಾರಿಬಿದ್ದ ಪರಿಣಾಮ ಪಕ್ಕದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದಿನ ಧ್ವಜಸ್ತಂಭ ಮುರಿದುಹೋಗಿದೆ.

ರಾಧಾ ಶಿವರಾಯ ನಾಯಕ ಎಂಬುವರ ಮನೆಯ ಚಾವಣಿ ಹಾರಿ, ಹಾನಿ ಉಂಟಾಗಿದೆ. ಜೋರು ಮಳೆಯೂ ಸುರಿದಿದ್ದರಿಂದ ಮನೆಯಲ್ಲಿನ ಸಾಮಗ್ರಿಗಳು ತೊಯ್ದು, ಹಾಳಾಗಿವೆ.

ತಹಶೀಲ್ದಾರ್ ಚಿಕ್ಕಪ್ಪ ನಾಯಕ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಗ್ರಾಮ ಆಡಳಿತ ಅಧಿಕಾರಿಗಳಿಂದ ಹಾನಿ ಕುರಿತು ವರದಿ ಪಡೆದಿದ್ದೇನೆ. ಈ ಬಗ್ಗೆ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.