ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ: ಬಾವಿ ಕೆಲಸಕ್ಕೆ ಬಂದಿದ್ದ ಕೂಲಿಕಾರ್ಮಿಕ ಸಾವು

Published 8 ಮಾರ್ಚ್ 2024, 15:29 IST
Last Updated 8 ಮಾರ್ಚ್ 2024, 15:29 IST
ಅಕ್ಷರ ಗಾತ್ರ

ಹೊನ್ನಾವರ: ಬಾವಿ ಕೆಲಸಕ್ಕೆಂದು ಕೇರಳದಿಂದ ಚಂದಾವರಕ್ಕೆ ಬಂದಿದ್ದ ಕೂಲಿ ಕಾರ್ಮಿಕರೊಬ್ಬರು ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದಾರೆ.

ತಿರುವನಂತಪುರ ವರಕಲಾ ಶ್ರೀನಿವಾಸಪುರಂನ ಪ್ರತಾಪನ್ ಸೋಮನ್ ಕೊರವಾ (60) ಮೃತರು.

ಮೃತರ ಜೊತೆ ಕೆಲಸಕ್ಕೆಂದು ಬಂದಿದ್ದ ಅದೇ ಊರಿನ ಸತೀಸನ್ ಎನ್ನುವವರು ಇಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ.

ಚಂದಾವರ ನಾಕಾದ ಗಂಗೆ ಮಾರು ಮುಕ್ರಿ ಅವರ ಮನೆಯ ಬಾವಿಗೆ ರಿಂಗ್ ಇಳಿಸುವ ಕೆಲಸ ಮುಗಿಸಿ ಸಂಜೆ ಅವರ ಮನೆಯಲ್ಲಿ ಕುಳಿತಿದ್ದಾಗ ಪ್ರತಾಪನ್ ಅವರಿಗೆ ಎದೆ ನೋವು ಕಾಣಿಸಿತು. ಅವರನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಾಲಾಯಿತು. ಆದರೆ ಮಾರ್ಗಮಧ್ಯೆಯೆ ಅವರು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೋಟಾರ್ ಸೈಕಲ್ ಕಳವು

ಹೊನ್ನಾವರ: ಪಟ್ಟಣದ ವಿವಿಧೆಡೆ ಎರಡು ದಿನಗಳ ಹಿಂದೆ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಎರಡು ಮೋಟಾರ್ ಸೈಕಲ್ ಕಳವು ಆಗಿವೆ. 

ಪ್ರಭಾತನಗರ ಹಾಗೂ ಅಸೂರಖಾನಗಲ್ಲಿಯಲ್ಲಿ ಘಟನೆ ನಡೆದಿದ್ದು, ಮೋಟಾರ್ ಸೈಕಲ್ ಮಾಲೀಕರಾದ ಮಕ್ಬುಲ್ ಮನ್ಸೂರ್ ಮಿರಾಜಿ ಹಾಗೂ ಇಸ್ಮಾಯಿಲ್ ಅಬ್ದುಲ್ ಸತ್ತಾರ್ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT