ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಗಾರ ಭೂಕುಸಿತ: ಶಾಸಕರಿಂದ ಪರಿಶೀಲನೆ

Published : 18 ಆಗಸ್ಟ್ 2024, 12:47 IST
Last Updated : 18 ಆಗಸ್ಟ್ 2024, 12:47 IST
ಫಾಲೋ ಮಾಡಿ
Comments

ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯಿಂದ ಬೀಗಾರ-ಬಾಗಿನಕಟ್ಟಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಳಭಾಗ ಈ ಬಾರಿಯ ಮಳೆಗೆ ಕುಸಿದಿದ್ದು ಈ ಪ್ರದೇಶವನ್ನು ಶಾಸಕ ಶಿವರಾಮ ಹೆಬ್ಬಾರ ಭಾನುವಾರ ಪರಿಶೀಲಿಸಿದರು.

ಕಳೆದ ಒಂದೆರಡು ವರ್ಷದಿಂದಲೂ ರಸ್ತೆಯ ಕೆಳಭಾಗ ಕುಸಿಯುತ್ತಿದೆ. ಇದು ಹೀಗೆ ಮುಂದುವರೆದರೆ ಈ ಭಾಗಕ್ಕೆ ಸಂಪರ್ಕ ಕಷ್ಟಸಾಧ್ಯ. ಕಾರಣ ಅತಿ ಶೀಘ್ರ ರಸ್ತೆ ಕುಸಿಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಶಾಸಕ ಹೆಬ್ಬಾರ, ಸಮಸ್ಯೆಯ ಕುರಿತು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಗ್ರಾಮದ ಹಿರಿಯರಾದ ಗ.ನಾ.ಕೋಮಾರ, ದೇವಸ್ಥಾನದ ಮೊಕ್ತೇಸರ ನಾರಾಯಣ ಹೆಗಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಗೀರಥ ನಾಯ್ಕ, ಉಪಾಧ್ಯಕ್ಷೆ ಗಂಗಾ ಕೋಮಾರ, ಪ್ರಮುಖರಾದ ಗಜಾನನ ಭಟ್, ಟಿ.ಸಿ.ಗಾಂವ್ಕರ, ಶಿವರಾಮ ಗಾಂವ್ಕರ, ಸುಬ್ರಹ್ಮಣ್ಯ ಗಾಂವ್ಕರ, ರಾಮಕೃಷ್ಣ ಭಟ್, ಗಂಗಾಧರ ಪಟೇಲ್, ರಾಘವೇಂದ್ರ ಭಟ್, ನವೀನ ಕಿರಗಾರೆ, ಮಹಾಬಲೇಶ್ವರ ಭಟ್, ರಾಮ ಕೋಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT