ಸಿದ್ದಾಪುರ: ತಾಲ್ಲೂಕಿನ ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮ ಡಿ. 28ರಂದು ಆಯೋಜಿಸಲಾಗಿದೆ ಎಂದು ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ, ಕಾರ್ಯದರ್ಶಿ ಸಂಜಯ ಹೆಗಡೆ ಹುಲಿಮನೆ ತಿಳಿಸಿದ್ದಾರೆ.

ಡಿ. 28ರಂದು ಧಾರ್ಮಿಕ ಕಾರ್ಯಕ್ರಮದೊಂದಿಗೆ ಸುವರ್ಣ ಸಂಭ್ರಮಕ್ಕೆ ಚಾಲನೆ ದೊರೆಯಲಿದೆ. 10.30ಕ್ಕೆ ಸಿದ್ದಾಪುರ ಶಿಕ್ಷಣ ಪ್ರಸಾರ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ವಿ. ಹೆಗಡೆ ಪೇಟೇಸರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಶಾಸಕ ಭೀಮಣ್ಣ ನಾಯ್ಕ, ಶಿರಸಿ ಡೆವಲಪ್ಮೆಂಟ್ ಸೊಸೈಟಿ ಕೃಷಿ ಸಲಹೆಗಾರ ಡಾ. ವಿ.ಎಮ್. ಹೆಗಡೆ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರುಣ್ ಎಚ್.ಜಿ., ಶ್ರೀಮರ್ಗಾವಿನಾಯಕ ದೇವಸ್ಥಾನದ ಮೊತ್ತೇಸರ ಶ್ರೀಧರ ಹೆಗಡೆ ಪೇಟೇಸರ ಉಪಸ್ಥಿತರಿರಲಿದ್ದಾರೆ.

ಮಧ್ಯಾಹ್ನ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ, ಸಂಜೆ ಸಂಘದ ನೆನಪು-ಮೆಲುಕು ಗೌರವ ಸಮರ್ಪಣೆ, ಸ್ಮರಣಿಕೆ ವಿತರಣೆ, ಸಮಾರೋಪ ಸಮಾರಂಭ ನಡೆಯಲಿದ್ದು, ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಯಲ್ಲಾಪುರ ಸಂಕಲ್ಪ ಪ್ರಮೋದ ಹೆಗಡೆ, ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಧೀರ್ ಗೌಡರ್ ಭಾಗವಹಿಸಲಿದ್ದಾರೆ.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.