ಕುಮಟಾ: ಕುಮಟಾ ತಹಸೀಲ್ದಾರ್ ಕಚೇರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗಣಕೀಕೃತ ಪಹಣಿ ಪತ್ರಿಕೆ ಪಡೆ ಯಲು ಜನರು ತಾಸುಗಟ್ಟಲೆ ಸರತಿಯ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಹಿಂದೆಲ್ಲ ಹಳ್ಳಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೇ ರೈತರಿಗೆ ಕೈ ಬರಹದ ಪಹಣಿ ಪತ್ರಿಕೆಗಳನ್ನು ನೀಡುವ ಪರಿಪಾಠ ಇದ್ದಾಗ ಪಹಣಿ ಪತ್ರಿಕೆ ಪಡೆಯುವುದು ಸುಲಭದ ಕೆಲಸವಾಗಿತ್ತು. ನಂತರ ಆಡಳಿತ ಸುಧಾ ರಣಾ ಪ್ರಕ್ರಿಯೆಯಡಿ ಮೊದಲು ತಾಲ್ಲೂಕು ಕಚೇರಿ ಗಳಲ್ಲಿ ನಂತರ ಹೋಬಳಿ ಮಟ್ಟದ ನೆಮ್ಮದಿ ಕೇಂದ್ರಗ ಳಲ್ಲಿ ಪಹಣಿ ನೀಡುವ ಪ್ರಕ್ರಿಯೆಗಳು ಗಣಕೀಕೃತ ಗೊಂಡವು. ಈ ವ್ಯವಸ್ಥೆಗೆ ಸಾರ್ವಜನಿಕರು ಹೊಂದಿ ಕೊಳ್ಳುತ್ತಿದ್ದ ಹಾಗೇ ಹೋಬಳಿ ಮಟ್ಟದಲ್ಲಿ ಜನರ ನಿರೀ ಕ್ಷೆಯ ಮಟ್ಟದಲ್ಲಿ ಗಣಕೀಕೃತ ಪಹಣಿ ನೀಡುವ ಕೇಂದ್ರ ಗಳು ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.

ಪಟ್ಟಣದ ಬಸ್ತಪೇಟೆಯಲ್ಲಿ ಪಹಣಿ ನೀಡುವ ಗಣಕೀಕೃತ ಕೇಂದ್ರ ಸ್ಥಗಿತಗೊಂಡು ಒಂದು ತಿಂಗಳು ಕಳೆ ಯುತ್ತಾ ಬಂದಿದೆ. ಹಾಗಾಗಿ ರೈತರು ಪಹಣಿ ಪತ್ರಿಕೆ ಪಡೆಯಲು ತಾಲ್ಲೂಕು ಕೇಂದ್ರಕ್ಕೆ ಬಂದು ತಹಸೀ ಲ್ದಾರ್ ಕಚೇರಿಯಲ್ಲಿ ತಾಸುಗಟ್ಟಲೆ ಸರತಿಯಲ್ಲಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಉಂಟಾಗಿದೆ.

`ಹಿಂದೆ `ಕೊಮೆಟ್~ ಎನ್ನುವ ಖಾಸಗಿ ಸಂಸ್ಥೆಗೆ ಗಣಕೀಕೃತ ಪಹಣಿ ನೀಡುವ ಕೆಲಸವನ್ನು ಗುತ್ತಿಗೆ ನೀಡ ಲಾಗಿತ್ತು. ಆ ಸಂಸ್ಥೆಯ ಕೆಲಸ ಅಷ್ಟು ತೃಪ್ತಿದಾಯಕ ವಾಗಿಲ್ಲದ ಕಾರಣ ಬೇರೆ ಸಂಸ್ಥೆಗೆ ಆ ಕೆಲಸ ನೀಡುವ ಪ್ರಕ್ರಿಯೆ ಈಗ ರಾಜ್ಯದಾದ್ಯಂತ ಮುಂದುವರಿದಿದೆ. ಅದು ಮುಗಿಯುವವರೆಗೆ ಸಾರ್ವಜನಿಕರಿಗೆ ಕೊಂಚ ಅನಾನುಕೂಲತೆ ಆಗಲಿದೆ. ಜನರ ತೊಂದರೆಯ ಬಗ್ಗೆ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲರಿಗೂ ಪತ್ರ ಬರೆಯಲಾಗಿದೆ~ ಎಂದು ಕುಮಟಾ ತಹಸೀಲ್ದಾರ್ ವಿ.ಬಿ. ಫರ್ನಾಂಡೀಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.