ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಸಾಮಾಜಿಕ ಶಿಕ್ಷಣ ಅಗತ್ಯ

Last Updated 3 ಸೆಪ್ಟೆಂಬರ್ 2011, 6:00 IST
ಅಕ್ಷರ ಗಾತ್ರ

ಸಿದ್ದಾಪುರ: ಕೇವಲ ಸಾಂಪ್ರದಾಯಿಕ ಶಿಕ್ಷಣ ಪಡೆಯುವುದರಿಂದ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬರಲಾರದು ಎಂದು ಪ.ಪಂ. ಅಧ್ಯಕ್ಷ ಕೆ.ಜಿ.ನಾಯ್ಕ ನುಡಿದರು.

   ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ ಮತ್ತು ವಿದ್ಯಾರ್ಥಿ ಸಂಸತ್ ಅನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

 ಸಮಾಜದಲ್ಲಿರುವ ವಿವಿಧ ರೀತಿಯ ಜನರ ನೇರ ಸಂಪರ್ಕ ಪಡೆದಾಗ ಮಾತ್ರ ಅವರುಗಳ ನೋವು-ನಲಿವುಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು. ಪ.ಪಂ.ಸದಸ್ಯ ಗುರುರಾಜ ಶಾನಭಾಗ,ಸಾಮಾಜಿಕ ಕಾರ್ಯಕರ್ತ ರೋಹಿದಾಸ ಮಡಿವಾಳ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಕೆ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

 ಇಕೋ ಕ್ಲಬ್ ಉದ್ಘಾಟನೆ: ಇದೇ ಸಂದರ್ಭದಲ್ಲಿ ಕಾಲೇಜಿನ ಇಕೋ ಕ್ಲಬ್ ಅನ್ನು ಉದ್ಘಾಟಿಸಲಾಯಿತು. ಕ್ಲಬ್‌ನ ವಾರ್ಷಿಕ ಸೇವಾ ಯೋಜನೆಯ ಕುರಿತು ಸಂಚಾಲಕ ಎಲ್.ವಿ.ಭಟ್ಟ ಮಾತನಾಡಿದರು.

 ಉಪನ್ಯಾಸಕ ಬಂಗಾರಪ್ಪ ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಜಿ.ಎಸ್.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಂ.ಲಕ್ಷ್ಮಣ ವಂದಿಸಿದರು.ಬಿ.ಎಸ್.ಫರ್ನಾಂಡೀಸ್ ನಿರೂಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT