ಮುಂಡಗೋಡ: ಮತದಾನ ಮುಗಿಯುತ್ತಿದ್ದಂತೆ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ಮತಗಟ್ಟೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಿದ್ದಿರಬಹುದು, ವೋಟಿಂಗ್ ಪ್ರಮಾಣ ಹೆಚ್ಚಳವಾಗಿರುವಲ್ಲಿ ತಮಗೆಷ್ಟು ಲಾಭ ಅಥವಾ ನಷ್ಟವಾಗಲಿದೆ ಎಂಬ ಅಂದಾಜು ಮಾಡುತ್ತಿದ್ದಾರೆ ಅಭ್ಯರ್ಥಿಗಳು.

ಹಗಲಿರುಳು ದುಡಿದು ಸುಸ್ತಾಗಿರುವ ಸ್ಥಳೀಯ ಮುಖಂಡರು ಭಾನುವಾರ ವಿಶ್ರಾಂತಿ ಪಡೆದರು. ಕೆಲವರು ಎಲ್ಲೆಲ್ಲಿ ತಮ್ಮ ಪಕ್ಷಕ್ಕೆ ಅನುಕೂಲವಾಗಿದೆ. ಎಲ್ಲಿ ವಿರೋಧಿಗಳು ಮೇಲುಗೈ ಸಾಧಿಸಬಹುದು ಎಂಬ ಬಗ್ಗೆ ಕಾರ್ಯಕರ್ರೊಂದಿಗೆ ಚರ್ಚಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ81.85 ಮತದಾನವಾಗಿದೆ. ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಶೇ75ರಿಂದ ಶೇ90ರ ವರೆಗೆ ಮತದಾನವಾಗಿದೆ. ಇದು ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಗೆಲುವು ತಮ್ಮದೇ ಎಂದು ಹೇಳುತ್ತಿದ್ದಾರೆ. ಚಲಾವಣೆಯಾದ ಮತ ಪ್ರಮಾಣದ ಮೇಲೆ ಗೆಲುವಿನ ವಿಶ್ಲೇಷಣೆ ಮಾಡುತ್ತಿದ್ದಾರೆ.

ಜಾತಿಯ ಮತಗಳು ಹೇಗೆ ಹಂಚಿಕೆ ಆಗಿರಬಹುದು ಎಂಬುದನ್ನೂ ವಿಶ್ಲೇಷಿಸುತ್ತಿದ್ದಾರೆ. ಯಾರಿಂದ ಪಕ್ಷಕ್ಕೆ ಹಿನ್ನಡೆಯಾಯಿತು, ಯಾರು ಕೈಕೊಟ್ಟರು, ಒಳಗೊಳಗೆ ಯಾರು ವಿರೋಧಿಗಳಿಗೆ ಬೆಂಬಲ ನೀಡಿದರು ಎಂಬ ಚರ್ಚೆ ಬಿರುಸಾಗಿ ನಡೆದಿದೆ.

ಆದರೆ, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿರುವ ಮತದಾರರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಕೆಲವರು ಈ ಸಲ ಏನೂ ಹೇಳಲು ಆಗದು. ಸಮಬಲದ ಹೋರಾಟ ಕಂಡುಬಂದಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ ಎನ್ನುತ್ತ ಜಾಣತನದಿಂದ ಉತ್ತರ ನೀಡುತ್ತಿದ್ದಾರೆ. ಪಕ್ಷಗಳ ಪರವಾಗಿ ದುಡಿದಿರುವ ಕಾರ್ಯಕರ್ತರು ನಮ್ಮ ಗೆಲುವು ಎಂದು ಸವಾಲು ಹಾಕುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.