ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ | ಅಭಿವೃದ್ಧಿಗೆ ಕಾಮಗಾರಿಗೆ ₹553 ಕೋಟಿ ಮಂಜೂರು: ಶಾಸಕ ಡಾ. ಶ್ರೀನಿವಾಸ್

Published 7 ಮಾರ್ಚ್ 2024, 15:19 IST
Last Updated 7 ಮಾರ್ಚ್ 2024, 15:19 IST
ಅಕ್ಷರ ಗಾತ್ರ

ಕೂಡ್ಲಿಗಿ: 'ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಅನುದಾನವಿಲ್ಲ ಎಂಬ ಅಪಪ್ರಚಾರ ಮಾಡುವವರಿಗೆ ಕ್ಷೇತ್ರಕ್ಕೆ ಮಂಜೂರಾಗಿರುವ ₹553 ಕೋಟಿ ಅನುದಾನವೇ ಸಾಕ್ಷಿಯಾಗಿದೆ’ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳ ₹25 ಕೋಟಿ ವಿಶೇಷ ಅನುದಾನ, ಲೋಕೋಪಯೋಗಿ ಇಲಾಖೆಗೆ ₹34.80 ಕೋಟಿ, ಸಣ್ಣ ನೀರಾವಾರಿ ಇಲಾಖೆಗೆ ₹62.12 ಕೋಟಿ, ಪಟ್ಟಣದ ಅಭಿವೃದ್ಧಿಗೆ ನಗರಾಭಿವೃದ್ಧಿ ಇಲಾಖೆಯಿಂದ ₹81.81 ಕೋಟಿ, ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಇತರೆ ಯೋಜನೆಗೆ ಕೆಕೆಆರ್‌ಡಿಬಿಯಿಂದ ₹80 ಕೋಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ₹121 ಕೋಟಿ, ದೇವಸ್ಥಾನಗಳ ಜೀರ್ಣೋದ್ಧಾರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಸೇರಿದಂತೆ ಒಟ್ಟು ₹553 ಕೋಟಿ ಅನುದಾನ ಮಂಜೂರಾಗಿದೆ ಎಂದ ತಿಳಿಸಿದರು.

‘ಹಿಂದುಳಿದ ಕ್ಷೇತ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಕ್ಷೇತ್ರದಾದ್ಯಂತ ಸಂಚರಿಸಿ ಜನರ ಕಷ್ಟಗಳನ್ನು ಅರಿತ್ತಿದ್ದೇನೆ. ಮಾರ್ಚ್ ಅಂತ್ಯಕ್ಕೆ ಕ್ಷೇತ್ರದ ಕೆರೆಗಳಿಗೆ ನೀರು ಹರಿದು ಬರಲಿದೆ. ಅಲ್ಲದೆ ಕೂಡ್ಲಿಗಿ ಪಟ್ಟಣವೊಂದಕ್ಕೆ 600ಕ್ಕೂ ಹೆಚ್ಚು ಮನೆಗಳು ಮಂಜೂರಾಗಿವೆ. ಇವೆಲ್ಲವೂ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲ ಎನ್ನುವವರಿಗೆ ಉತ್ತರವಾಗಿದೆ’ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ, ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಬಸವೇಶ್ವರ, ಉಪಾಧ್ಯಕ್ಷ ಜಿ.ಆರ್. ಸಿದ್ದೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೂಡ್ಲಿಗಿಯ ಎಂ.ಗುರುಸಿದ್ದನಗೌಡ, ಹೊಸಹಳ್ಳಿಯ ಕುಮಾರ ಗೌಡ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗಮಣಿ ಜಿಂಕಲ್, ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ, ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಮುಖಂಡರಾದ ವಿಶಾಲಾಕ್ಷಮ್ಮ, ಉದಯ ಜನ್ನು, ಟಿ.ಜಿ.ಮಲ್ಲಿಕಾರ್ಜುನ ಗೌಡ, ಕೆ.ಸಿದ್ದಪ್ಪ, ಅಜ್ಜನಗೌಡ, ಶಾಂತನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT