ಎರಡು ಪ್ರತ್ಯೇಕ ಪ್ರಕರಣ; ₹8 ಲಕ್ಷ ನಗದು ವಶ

ಹೊಸಪೇಟೆ (ವಿಜಯನಗರ): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ರಹಿತ ₹8 ಲಕ್ಷ ನಗದು ಹಣ ಪೊಲೀಸರು ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಹೊಸಪೇಟೆ– ಶಿವಮೊಗ್ಗ ರಾಜ್ಯ ಹೆದ್ದಾರಿ 25ರ ದುಗ್ಗಾವತಿ ಚೆಕ್ ಪೋಸ್ಟ್‌ನಲ್ಲಿ ಸಂತೋಷ್ ಎಂಬುವರು ಮುತ್ತೂಟ್ ಫೈನಾನ್ಸ್ ಹರಿಹರ ಶಾಖೆಯಿಂದ ಬೈಕ್‌ನಲ್ಲಿ ₹5 ಲಕ್ಷ ತೆಗೆದುಕೊಂಡು ಹೋಗುತ್ತಿದ್ದರು. ದಾವಣಗೆರೆ ಜಿಲ್ಲೆಯ ಕಕ್ಕರಗೊಳ್ಳದ ತಿಮ್ಮೇಶ್ ಅವರ ಕಾರಿನಿಂದ ₹3 ಲಕ್ಷ ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರು ಹಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತೋರಿಸದ ಕಾರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.