ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯತ್ರಿ ಪರ ಕರುಣಾಕರ ರಡ್ಡಿ ಪ್ರಚಾರ

Published 13 ಏಪ್ರಿಲ್ 2024, 14:18 IST
Last Updated 13 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ಅರಸೀಕೆರೆ: 'ಸದೃಢ ಭಾರತ ನಿರ್ಮಾಣಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮತ ನೀಡಿ, ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು’ ಎಂದು ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಹೋಬಳಿಯ ಹಿರೇಮೆಗಳಗೆರೆ ಗ್ರಾಮದಲ್ಲಿ ಶನಿವಾರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರಸಕ್ತ ಲೋಕಸಭಾ ಚುನಾವಣೆ ದೇಶದ ಹಿತದೃಷ್ಟಿಯಿಂದಾಗಿ ಮಹತ್ವ ಪಡೆದಿದೆ. ಬಿಜೆಪಿ ಅಧಿಕ ಸ್ಥಾನ ಪಡೆದುಕೊಂಡು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ಮತ್ತೆ ರಚನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೋದಿಯವರ ಆಡಳಿತದಿಂದ ನೆರೆಯ ಶತ್ರು ರಾಷ್ಟ್ರಗಳಿಗೆ ಭಯ ಉಂಟಾಗಿದೆ. ದೇಶದ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ‘ಬಿಜೆಪಿಯ ಜನಪರ ಯೋಜನೆಗಳು ಗೆಲುವಿಗೆ ಸಹಕಾರ ಆಗಲಿದೆ. ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಬೇಕು’ ಎಂದರು.

ಮುಖಂಡರಾದ ಲೋಕೇಶ್, ವಡ್ಡಿನಹಳ್ಳಿ ಮಂಜುನಾಥ, ನರೇಶ, ಪೋತಲಕಟ್ಟೆ ಮಂಜುನಾಥ, ವೆಂಕಟೇಶ ನಾಯ್ಕ, ಮಹೇಶ, ಹೊನ್ನಪ್ಪ, ರುದ್ರಪ್ಪ, ರೇವಜ್ಜ, ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT