ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಮೇಲ್ಚಾವಣಿ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವು

Published 19 ಏಪ್ರಿಲ್ 2024, 13:39 IST
Last Updated 19 ಏಪ್ರಿಲ್ 2024, 13:39 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ ಜಿಲ್ಲೆ): ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಗುರುವಾರ ಬೀಸಿದ ಗಾಳಿ, ಮಳೆಗೆ ಮನೆಯ ಮೇಲ್ಚಾವಣೆ ತಗಡು ಕುಸಿದು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಶುಕ್ರವಾರ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದಡ್ಡಿ ನಾಗಮ್ಮ (48) ಮೃತ ಮಹಿಳೆ.  ಮಳೆಗಿಂತಲೂ ಹೆಚ್ಚಾಗಿ ಬಲವಾಗಿ ಗಾಳಿ ಬೀಸಿದ್ದರಿಂದ ಮನೆಯ ಮೇಲ್ಚಾವಣೆ ತಗಡು ಕುಸಿದು ಬಿದ್ದಿತ್ತು. ಅದು ನಾಗಮ್ಮ ಅವರ ತಲೆಯ ಮೇಲೆಯೇ ಬಿದ್ದ ಕಾರಣ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಗರಿಬೊಮ್ಮನಹಳ್ಳಿಗೆ ಹಾಗೂ ಕೊನೆಗೆ ಕೊಪ್ಪಳದ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿತ್ತು.

ಕಂದಾಯ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಶುಕ್ರವಾರ ಮನೆಗೆ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT