ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಮೂರು ದಿನದಲ್ಲಿ ಮದುವೆಯಾಗಲಿದ್ದ ಯುವತಿ ಅನುಮಾನಾಸ್ಪದ ಸಾವು

Published : 20 ನವೆಂಬರ್ 2023, 7:28 IST
Last Updated : 20 ನವೆಂಬರ್ 2023, 7:28 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಇದೇ 23ರಂದು ನಗರದ ಸಾಯಿಲೀಲಾ ಮಂಟಪದಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯೊಬ್ಬರು ಭಾನುವಾರ ಟಿ.ಬಿ.ಡ್ಯಾಂ ಪ್ರದೇಶದಲ್ಲಿರುವ ಭಾವಿ ಪತಿಯ ಅಜ್ಜಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮೃತ ಐಶ್ವರ್ಯ ಮತ್ತು ಅಶೋಕ್‌ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿ ಅವರ ಪ್ರೀತಿಗೆ ಅಡ್ಡಿ ಬಂದಿತ್ತು. ಕೊನೆಗೆ ಮಾತುಕತೆ ನಡೆದು, ಮದುವೆಗೆ ಒಂದು ವಾರ ಮೊದಲೇ ವರನ ಮನೆಗೆ ಕಳುಹಿಸಬೇಕು ಎಂದು ತಿಳಿಸಿದಂತೆ ಇದೇ 15ರಂದು ಯುವತಿಯ ತಂದೆ ಯುವಕನ ಅಜ್ಜಿ ರಾಜೇಶ್ವರಿ ಅವರ ಮನೆಗೆ ತಂದು ಬಿಟ್ಟಿದ್ದರು.

ಭಾನುವಾರ ಮನೆ ಮಂದಿ ಕಾರ್ಯಕ್ರಮಕ್ಕೆಂದು ಹೊರಗಡೆ ಹೋಗಿದ್ದ ವೇಳೆ ಐಶ್ವರ್ಯ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರನ್ನು ಮನೆಯವರು ಬಳಿಕ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಅವರು ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು.

ಈ ಸಾವಿನ ಬಗ್ಗೆ ಸಂಶಯವಿದೆ, ಪತಿಯ ಮನೆಯವರು ನೀನು ಕೆಳಜಾತಿಯವಳು ಎಂದು ನಿಂದಿಸಿದ್ದರು. ಹೀಗಾಗಿ ಅಶೋಕ, ಅಂಬರೀಶ್ವರನ್‌, ಕೃಷ್ಣವೇಣಿ, ರಾಜೇಶ್ವರಿ, ಲೋಗನಾಥನ್‌, ರಘು ಹಾಗೂ ಇತರರ ಮೇಲೆ ಸಂಶಯ ಇದೆ ಎಂದು ಬಿ.ಡ್ಯಾಂ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಇಲ್ಲಿನ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಮರಣೋತ್ತರ ಪರೀಕ್ಷೆ ನಡೆದಿದ್ದು, ವಿಚಾರಣೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT