ಹೊಸಪೇಟೆ (ವಿಜಯನಗರ): ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ ಅವರು ಬುಧವಾರ ಹಂಪಿಗೆ ಭೇಟಿ ನೀಡಿ ಹಲವು ದೇವಾಲಯಗಳಿಗೆ ತೆರೆಳಿ ಪೂಜೆ ಸಲ್ಲಿಸಿದರು ಹಾಗೂ ಸ್ಮಾರಕಗಳನ್ನು ವೀಕ್ಷಿಸಿದರು.

ಪ್ರತಿ ವರ್ಷ ಮಂತ್ರಾಲಯದಲ್ಲಿ ನಡೆಯುವ ರಾಘವೇಂದ್ರ ಯತಿಗಳ ವರ್ಧಂತಿಯಲ್ಲಿ ಪಾಲ್ಗೊಂಡು ಹಂಪಿಗೆ ಬಂದು ಹೋಗುವ ಸಂಪ್ರದಾಯವನ್ನು ಜಗ್ಗೇಶ್ ಇಟ್ಟುಕೊಂಡಿದ್ದು, ಈ ಬಾರಿಯೂ ಅದನ್ನು ಮುಂದುವರಿಸಿದರು.

‘ಹಂಪಿಗೆ ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಈಗಾಗಲೇ ಹಂಪಿ ಅಭಿವೃದ್ಧಿ ಕುರಿತಂತೆ ಎರಡು ಸಭೆಗಳು ನಡೆದಿವೆ’ ಎಂದು ರಾಜ್ಯಸಭೆಯ ವಾಯುಯಾನ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಮಿತಿಯ ಸದಸ್ಯರೂ ಆಗಿರುವ ಜಗ್ಗೇಶ್ ಹೇಳಿದರು. ಈ ಸಮಿತಿಯಲ್ಲಿ ಸುಧಾ ಮೂರ್ತಿ ಅವರು ಸಹ ಇದ್ದು, ಹಂಪಿಯ ಕುರಿತಂತೆ ಗಂಭೀರ ಚರ್ಚೆ ನಡೆಸಿದ್ದನ್ನು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.