ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ: ಜಾನುವಾರು ಕಳವು

Published 29 ಮಾರ್ಚ್ 2024, 15:11 IST
Last Updated 29 ಮಾರ್ಚ್ 2024, 15:11 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪಟ್ಟಣದ ಬಸವೇಶ್ವರ ನಗರದ ರಿಂಗ್ ರೋಡ್ ಬಳಿ ಮನೆಯ ಪಕ್ಕ ಕಟ್ಟಿದ್ದ ಮಿಶ್ರತಳಿಯ ಎರಡು ಆಕಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಮಣ್ಣಪ್ಪನವರ ಗಿರಿಯಪ್ಪ ಅವರಿಗೆ ಸೇರಿದ ತಲಾ ₹50 ಸಾವಿರ ಮೌಲ್ಯದ ಎರಡು ಆಕಳು ಕಳುವಾಗಿವೆ. ಗುರುವಾರ ರಾತ್ರಿ ಒಂದು ಆಕಳು ಮತ್ತು ನಾಲ್ಕು ದಿನಗಳ ಹಿಂದೆ ಒಂದು ಆಕಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪಟ್ಟಣದಲ್ಲಿ ಈಚೆಗೆ ಮನೆಕಳವು, ಜಾನುವಾರು ಕಳವು ಪ್ರಕರಣಗಳು ಹೆಚ್ಚಾಗಿವೆ. ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳರು ಕೈಚಳಕ ಮೆರೆಯುತ್ತಿದ್ದಾರೆ. ಪೊಲೀಸರು ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT