ಪ್ರಜಾವಾಣಿ ವಾರ್ತೆ

ಹೊಸಪೇಟೆ (ವಿಜಯನಗರ): ನಗರಸಭೆಯ ನೂತನ ಆಯುಕ್ತರಾಗಿ ಎರಗುಡಿ ಶಿವಕುಮಾರ್ ಬುಧವಾರ ಅಧಿಕಾರ ವಹಿಸಿಕೊಂಡರು.

ಈವರೆಗೆ ಆಯುಕ್ತರಾಗಿದ್ದ ಸಿ.ಚಂದ್ರಪ್ಪ ಅವರು ಕಳೆದ ತಿಂಗಳು ವರ್ಗಾವಣೆ ಆದೇಶ ಬಂದಾಗ ಬೆಳಗಾವಿಯ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಿಯ ಮೊರೆ ಹೋಗಿ ತಡೆಯಾಜ್ಞೆ ತರಿಸಿದ್ದರು. ಸುಮಾರು ಮೂರು ವಾರ ಮತ್ತೆ ಅಧಿಕಾರ ನಡೆಸಿದ ಅವರು ಇದೀಗ ಮೂಲ ವರ್ಗಾವಣೆ ಆದೇಶವನ್ನು ಪುರಸ್ಕರಿಸಿ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದಾರೆ.

ಕೆಎಟಿಯ ಮುಂದಿನ ವಿಚಾರಣೆ ಆಗಸ್ಟ್ 11ಕ್ಕೆ ನಿಗದಿಯಾಗಿತ್ತು. ಅದಕ್ಕೆ ಮೊದಲಾಗಿಯೇ ಚಂದ್ರಪ್ಪ ಅವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಭಾರಿ ಒತ್ತಡದ ಪರಿಸ್ಥಿತಿಗೆ ಸಿಲುಕಿದ ಅವರು ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಹೇಳಲಾಗುತ್ತಿದೆ. ಚಂದ್ರಪ್ಪ ಅವರ ವರ್ಗಾವಣೆ ವಿರೋಧಿಸಿ ಮಾದಿಗ ಸಮುದಾಯದ ಮುಖಂಡರು, ಮಾದಿಗ ಸಮುದಾಯದ ಅಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳ ತಕ್ಷಣ ನಿಲ್ಲಿಸದಿದ್ದರೆ ಅಧಿಕಾರದಲ್ಲಿ ಇರುವ ಕೆಲವು ಜನಪ್ರತಿನಿಧಿಗಳು ತಮ್ಮ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.