ಶನಿವಾರ, ಸೆಪ್ಟೆಂಬರ್ 25, 2021
22 °C

ಕೂಡ್ಲಿಗಿ: ಮಿರ್ಚಿ ಕರಿದ ಕಾಂಗ್ರೆಸ್ ನಾಯಕ ಸಂತೋಷ್ ಲಾಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಕಾಂಗ್ರೆಸ್ ಪಕ್ಷದ ಕೋವಿಡ್‌ ಆರೋಗ್ಯ ಸಹಾಯ ಹಸ್ತ ಕಾರ್ಯಕ್ರಮದ ಜಿಲ್ಲಾ ವೀಕ್ಷಕ ಸಂತೋಷ್ ಲಾಡ್ ಮಂಗಳವಾರ ಪಟ್ಟಣದ ಹೋಟೆಲ್ ಒಂದರಲ್ಲಿ ಮಿರ್ಚಿ ಕರಿದು ಗಮನ ಸೆಳೆದರು.

ಪಟ್ಟಣದ ಮದಕರಿ ನಾಯಕ ವೃತ್ತದಲ್ಲಿ ಅವರ ವೈಯಕ್ತಿಕ ವೆಚ್ಚದಲ್ಲಿ ನಿತ್ಯ ಬಡ ಜನರಿಗೆ ಆಹಾರ ವಿತರಣೆ ಮಾಡುತ್ತಿರುವುದನ್ನು ಪರಿಶೀಲಿಸಿದ ಅವರು, ಜನರೊಂದಿಗೆ ಅವರು ಕೂಡ ರಸ್ತೆಯ ಬದಿಯಲ್ಲಿಯೇ ನಿಂತು ಊಟ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ಪಕ್ಕದ ಹೋಟೆಲಿನಿಂದ ಬಿಸಿ ಮಿರ್ಚಿ ತಂದು ಕೊಟ್ಟರು. 

ಆಹಾರದೊಂದಿಗೆ ಮಿರ್ಚಿಯನ್ನು ಸವಿದ ಲಾಡ್, ನಂತರ ಹೋಟೆಲ್‍ಗೆ ಹೋಗಿ, ಬಡ ಜನರಿಗೆ ಆಹಾರ ವಿತರಣೆ ಮಾಡುತ್ತಿರುವುದರಿಂದ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆಯೇ ಎಂದು ಹೋಟೆಲ್ ಮಾಲೀಕ ಬಸವರಾಜ್ ಅವರನ್ನು ವಿಚಾರಿಸಿದರು. ಪಕ್ಕದಲ್ಲಿದ್ದ ಜಿಲ್ಲಾ ಎಸ್ಟಿ ಮೊರ್ಚಾದ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ‘ವ್ಯಾಪಾರಕ್ಕೆ ಕಷ್ಟವಾಗುತ್ತಿದೆ ಎಂದು ಕೆಲವರು ತಮ್ಮ ಬಳಿ ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೋಟೆಲ್‌ನಲ್ಲಿ ಮಿರ್ಚಿ ಹಾಕುತ್ತಿರುವುದನ್ನು ಕಂಡ ಸಂತೋಷ್ ಲಾಡ್, ಅವರ ಬಳಿ ಹೋಗಿ ಐದಾರು ಮೆಣಸಿನಕಾಯಿಯನ್ನು ಹಿಟ್ಟಿನಲ್ಲಿ ಎದ್ದಿ ಎಣ್ಣೆಯಲ್ಲಿ ಕರಿದರು.

ಶಾಸಕ ಈ. ತುಕಾರಾಂ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಗುರುಸಿದ್ದನಗೌಡ, ಹೊಸಪೇಟೆ ಬ್ಲಾಕ್ ಅಧ್ಯಕ್ಷ ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ್ ರಘು, ಹಡಗಲಿ ವೀರಭದ್ರಪ್ಪ, ಡಾಣಿ ರಾಘವೇಂದ್ರ, ಜಿ.ಆರ್. ಸಿದ್ದೇಶ, ಪಟ್ಟಣ ಪಂಚಾಯ್ತಿ ಸದಸ್ಯ ಸೈಯದ್ ಶುಕೂರ್, ಎನ್. ದುರುಗೇಶ್, ಬೋಸಣ್ಣ, ಸಿ.ಬಿ. ಸಿದ್ದೇಶ, ಎಂ. ಕುಮಾರಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು