ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿವಾರು ನಿಗಮ ರದ್ದುಪಡಿಸಿ: ಸಿಎಂಗೆ ಮನವಿ

Published : 26 ಸೆಪ್ಟೆಂಬರ್ 2024, 15:40 IST
Last Updated : 26 ಸೆಪ್ಟೆಂಬರ್ 2024, 15:40 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಅಸಂಖ್ಯಾತ ಹಿಂದುಳಿದ ಜಾತಿಗಳ ಹಿತದೃಷ್ಠಿಯಿಂದ ಸರ್ಕಾರವು ಕೂಡಲೇ ಜಾತಿವಾರು ನಿಗಮಗಳನ್ನು ವಿಸರ್ಜಿಸಿ ಈ ಮೊದಲು ಇದ್ದಂತೆ ಎಲ್ಲಾ ಒಬಿಸಿ ಜಾತಿಗಳನ್ನು ದೇವರಾಜ ಅರಸು ನಿಗಮಗಳಲ್ಲಿ ವಿಲೀನಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.

ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದ ವೇಳೆ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್‌ ಅವರು ಮನವಿ ಸಲ್ಲಿಸಿ ಈ ಒತ್ತಾಯ ಮಾಡಿದ್ದಾರೆ.

ದೇವರಾಜ ಅರಸು ನಿಗಮದ ವ್ಯಾಪ್ತಿಯಲ್ಲಿದ್ಧಾಗ ಪ್ರತಿಯೊಂದು ಜಾತಿಗಳಿಗೆ ಈ ಹಿಂದೆ ತಾಲ್ಲೂಕಿನಲ್ಲಿ 15 ರಿಂದ 20 ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು. ಆದರೆ ಪ್ರತ್ಯೇಕ ನಿಗಮ ರಚನೆಯ ನಂತರ 2 ಅಥವಾ 3 ಮಂದಿಗಷ್ಟೇ ಸೌಲಭ್ಯ ದೊರೆಯುತ್ತಿದೆ. ನಿರುದ್ಯೋಗಿಗಳು ಸಾಲ ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಯು.ಆಂಜನೇಯಲು, ಅಲೆಮಾರಿ ಸಮುದಾಯಗಳ ಮುಖಂಡ ಸಣ್ಣಮಾರೆಪ್ಪ, ಕರಿಯಪ್ಪ ಗುಡಿಮನಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT