ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಖಾಸಗಿ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕ ಮತ್ತು ಸಿಬ್ಬಂದಿಯ ಕಿರುಕುಳದಿಂದ ಬೇಸತ್ತು ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ಸರಕುಸಾಗಣೆ ವಾಹನ ಚಾಲಕ ಅಂಬೇಶ್ (36) ಎಂಬುವರು ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮೂರು ವರ್ಷದ ಹಿಂದೆ ಸಾಲ ಪಡೆದಿದ್ದ ಅಂಬೇಶ್, ಕಳೆದ 3 ತಿಂಗಳಿನಿಂದ ದುಡಿಮೆ ಇಲ್ಲದ ಕಾರಣ ತಿಂಗಳ ಕಂತು ₹14,301 ಕಟ್ಟಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಮೂರು ದಿನಗಳಿಂದ ಅವರ ಮನೆ ಬಳಿ ಬಂದ ಚೋಳಾ ಫೈನಾನ್ಸ್ ಕಂಪನಿಯ ಸಿಬ್ಬಂದಿ ಅವಾಚ್ಯ ಪದಗಳಿಂದ ನಿಂದಿಸಿದ್ದರು’ ಎಂದು ಅಂಬೇಶ್ ಪತ್ನಿ ಕೆ.ಮಂಜುಳಾ ದೂರು ನೀಡಿದ್ದಾರೆ.

‘ಪೈನಾನ್ಸ್ ವ್ಯವಸ್ಥಾಪಕ ಮತ್ತು ಸಿಬ್ಬಂದಿ ನಾಗಲಾಪುರ ತಾಂಡಾದ ನವೀನ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ತಂಬ್ರಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.