ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಟ್ಟಡ ನಿರ್ಮಾಣ ಸಾಮಗ್ರಿ ಪ್ರದರ್ಶನಕ್ಕೆ ತೆರೆ

ಪ್ರತಿ ವರ್ಷ ಆಯೋಜಿಸಲು ನಿರ್ಧಾರ– 25 ಸಾವಿರಕ್ಕೂ ಅಧಿಕ ಮಂದಿ ಭೇಟಿ
Published : 28 ಸೆಪ್ಟೆಂಬರ್ 2024, 16:04 IST
Last Updated : 28 ಸೆಪ್ಟೆಂಬರ್ 2024, 16:04 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಇಲ್ಲಿನ ಮಲ್ಲಿಗೆ ಹೋಟೆಲ್‌ ಆವರಣದಲ್ಲಿ ಮೂರು ದಿನ ನಡೆದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪ್ರದರ್ಶನ ‘ಬಿಲ್ಡ್‌ ಟೆಕ್‌–2024’ ಭಾನುವಾರ ಎಂಜಿನಿಯರ್ಸ್ ಡೇ ಆಚರಣೆಯೊಂದಿಗೆ ಕೊನೆಗೊಂಡಿತು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ (ಎಸಿಸಿಇ ಆ್ಯಂಡ್ ಎ) ಅಧ್ಯಕ್ಷ ಭೂಪಾಳ ಶ್ರೀಪಾದ್ ಮಾತನಾಡಿ, ‘25 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಪ್ರದರ್ಶನ ನಡೆಸಲು ಯೋಜಿಸಿದ್ದೇವೆ’ ಎಂದು ಹೇಳಿದರು.

ಸಿದ್ಧಾರ್ಥ ಸಿಂಗ್ ಮಾತನಾಡಿ, ‘ವಾಸ್ತು ವಿನ್ಯಾಸಕಾರ ಶ್ರೀಪಾದ್‌ ಅವರಿಗೆ ವಿಶ್ವಕರ್ಮ ಪ್ರಶಸ್ತಿ ಸಲ್ಲಬೇಕು’ ಎಂದರು.

ನಗರಸಭೆಯ ಅಧ್ಯಕ್ಷ ಎನ್‌.ರೂಪೇಶ್‌ ಕುಮಾರ್‌, ಉಪಾಧ್ಯಕ್ಷ ರಮೇಶ್‌ ಗುಪ್ತ, ಸಂಘಟಕ ಯುಎಸ್‌ ಕಮ್ಯುನಿಕೇಷನ್ಸ್‌ನ ಉಮಾಪತಿ ಮಾತನಾಡಿದರು.

ಸಂಘದ ಕಾರ್ಯದರ್ಶಿ ಡಿ.ಚಂದ್ರಶೇಖರ್‌, ಉಪಾಧ್ಯಕ್ಷ ರಾಮ ಜೋಶಿ, ಎಂಜಿನಿಯರ್‌ಗಳಾದ ಅರುಣ್ ತೆಗ್ಗಿ, ಗವಿಸಿದ್ದಯ್ಯ, ಅರುಣ್ ಕುಮಾರ ರಾಯಬಾಗಿ, ಗಣೇಶ್ ವೈದ್ಯ, ವೇಣುಗೋಪಾಲ್, ಕಲ್ಮೇಶ್ ತೋಟದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT