ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಲ್‌ಒ ಕೆಲಸದಿಂದ ಶಿಕ್ಷಕರಿಗೆ ವಿನಾಯಿತಿಗೆ ಆಗ್ರಹ

Last Updated 2 ನವೆಂಬರ್ 2022, 13:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬೂತ್‌ ಮಟ್ಟದ ಅಧಿಕಾರಿ (ಬಿ.ಎಲ್‌.ಒ.) ಕೆಲಸದಿಂದ ಶಿಕ್ಷಕರಿಗೆ ವಿನಾಯಿತಿ ಕೊಟ್ಟು ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವೈದ್ಯಕೀಯ ವೆಚ್ಚದ ಬಿಲ್‌ ಬೇಗ ವಿಲೇವಾರಿಗೊಳಿಸಬೇಕು. ಗುರು ಭವನ ನಿರ್ಮಾಣದ ಸಂಬಂಧ ಸಮಿತಿ ಸಭೆ ಕರೆಯಬೇಕಲು. ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಮುಖ್ಯಶಿಕ್ಷಕರ ಹುದ್ದೆಗೆ ಮತ್ತು ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಮಧ್ಯಾಹ್ನದ ಬಿಸಿಯೂಟದ ವೆಚ್ಚದ ಅನುದಾನವನ್ನು ನಿಗದಿತ ಕಾಲಕ್ಕೆ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು

ಸಂಘದ ಅಧ್ಯಕ್ಷ ಕೆ. ಬಸವರಾಜ, ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ, ನಿಕಟಪೂರ್ವ ಅಧ್ಯಕ್ಷ ಕೆ.ಮಾರ್ಗದಪ್ಪ, ಜಿಲ್ಲಾ ಉಪಾಧ್ಯಕ್ಷ ಎ.ಕುಬೇರಾಚಾರಿ, ಆರ್‌. ಸುಧಾದೇವಿ, ಝಾಕೀರ್‌ ಹುಸೇನ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರಿ, ಗೌರವ ಅಧ್ಯಕ್ಷ ಬಿ.ಕೆ.ಹೇಮರೆಡ್ಡಿ, ಖಜಾಂಚಿ ಎಲ್.ದ್ಯಾಮನಾಯ್ಕ, ಸಹಕಾರ್ಯದರ್ಶಿ ಬಸವನಗೌಡ.ಕೆ., ಸಂಘಟನಾ ಕಾರ್ಯದರ್ಶಿ ಬಿ.ಪರಶುರಾಮ, ನೀಲಮ್ಮ ಗಚ್ಚಿನಮಠ, ಸಂಚಾಲಕಎಚ್.ಎಂ.ಗುರುಬಸವರಾಜ, ನಿರ್ದೇಶಕರಾದ ರೇಣುಕಾ ಟಪಾಲ್, ಕಡ್ಲಿ ವೀರಭದ್ರೇಶ್, ಬಿ.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT