ವಿ.ವಿ ಕ್ಯಾಂಪಸ್‌ನಲ್ಲಿ ಕನ್ನಡ ಸಾಹಿತ್ಯ ಮಹಿಳಾ ಅಧ್ಯಯನ ಪತ್ರಿಕೋದ್ಯಮ ಯೋಗ ದೃಶ್ಯಕಲೆ ಮತ್ತು ಸಂಗೀತ ಸ್ನಾತಕೋತ್ತರ ಕೋರ್ಸ್‌ಗಳಿವೆ. ‘ನುಡಿ’ ಕಟ್ಟಡದಲ್ಲಿ ಅಗತ್ಯದ ಸ್ಮಾರ್ಟ್‌ಕ್ಲಾಸ್‌ಗಳಿವೆ. ಹೀಗಿದ್ದರೂ ಸ್ಮಾರ್ಟ್ ಕ್ಲಾಸ್ ಹಾಗೂ ಬೋರ್ಡ್‌ಗಳಿಗೆ ₹9.58 ಕೋಟಿಯನ್ನು ಪಟ್ಟಿಯಲ್ಲಿ ನಿಗದಿಪಡಿಸಲಾಗಿದೆ. ಇದು ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ ಎನ್ನುತ್ತವೆ ಮೂಲಗಳು. ಅನಂತಶಯನಗುಡಿ ಬಳಿಯ ವಿ.ವಿ ನಿವೇಶನದಲ್ಲಿ ಇನ್ನೊಂದು ಪ್ರಸಾರಾಂಗ ಕಟ್ಟಡ ನಿರ್ಮಿಸುವ ಯೋಜನೆ ಇದ್ದು ಅದಕ್ಕಾಗಿಯೇ ₹6.55 ಕೋಟಿ ನಿಗದಿಪಡಿಸಲಾಗಿದೆ. ಕ್ಯಾಂಪಸ್‌ನೊಳಗೆ ರಸ್ತೆ ಇದ್ದರೂ ಕಾಂಕ್ರೀಟ್ ಹಾಗೂ ಡಾಂಬರು ರಸ್ತೆಗೆ ₹3.44 ಕೋಟಿ ನಿಗದಿಪಡಿಸಲಾಗಿದೆ ಎನ್ನಲಾಗಿದೆ. ವಿ.ವಿ ಕ್ಯಾಂಪಸ್‌ಗೆ ಕಾಂಪೌಂಡ್ ಇಲ್ಲ. ಬೆಳ್ಳಿ ಭವನ ಅರ್ಧಂಬರ್ಧವಾಗಿ ನಿಂತಿದೆ. ಕ್ರೀಡಾಂಗಣ ಇಲ್ಲ... ಹೀಗೆ ಅಗತ್ಯದ ಕೆಲಸಗಳಿಗೆ ಈ ₹25 ಕೋಟಿ ಸಿಗಬೇಕಿತ್ತು ಎಂದು ಮೂಲಗಳು ತಿಳಿಸಿವೆ.