ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ನೀರಿನ ಹರಿವು; ಗೋಚರಿಸಿದ ಹಂಪಿ ಸ್ಮಾರಕಗಳು

Last Updated 16 ಆಗಸ್ಟ್ 2022, 13:49 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಒಂದು ತಿಂಗಳಿಗೂ ಹೆಚ್ಚು ಕಾಲ ತುಂಗಭದ್ರೆಯ ಒಡಲಲ್ಲಿ ಮುಳುಗಿದ್ದ ವಿಶ್ವಪ್ರಸಿದ್ಧ ಹಂಪಿಯ ಕೆಲ ಸ್ಮಾರಕಗಳು ಮತ್ತೆ ಗೋಚರಿಸುತ್ತಿವೆ.

ಕಳೆದ ಕೆಲವು ದಿನಗಳಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸತತವಾಗಿ ಇಳಿಮುಖವಾಗುತ್ತಿರುವುದೇ ಇದಕ್ಕೆ ಕಾರಣ. ನದಿ ತೀರಕ್ಕೆ ಹೊಂದಿಕೊಂಡಿರುವ ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆಯ ಮೇಲ್ಭಾಗ ಕಂಡರೆ, ಸ್ನಾನಘಟ್ಟ, ಚಕ್ರತೀರ್ಥದ ಮಂಟಪಗಳು, ಕೋದಂಡರಾಮ ದೇವಸ್ಥಾನದ ಆವರಣದಿಂದ ನೀರು ಹಿಂದೆ ಸರಿದಿದೆ. ಪ್ರವಾಸಿಗರು, ಭಕ್ತರು ಯಾವುದೇ ಅಡೆತಡೆಯಿಲ್ಲದೇ ಸ್ಮಾರಕ, ದೇವರ ದರ್ಶನ ಪಡೆಯುತ್ತಿದ್ದಾರೆ.

105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಸಂಪೂರ್ಣ ತುಂಬಿದೆ. 84608 ಕ್ಯುಸೆಕ್‌ ನೀರು ಪ್ರತಿ ಗಂಟೆಗೆ ಅಣೆಕಟ್ಟೆಗೆ ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. ಹತ್ತು ಸಾವಿರ ಕ್ಯುಸೆಕ್‌ ನೀರು ಕಾಲುವೆಗಳಿಗೆ ಬಿಡಲಾಗುತ್ತಿದೆ. ಸೋಮವಾರ 99242 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT