ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ | ಕಣ್ಮನ ಸೆಳೆವ ರಂಗೋಲಿ ಸ್ಪರ್ಧೆ

Published 4 ಫೆಬ್ರುವರಿ 2024, 6:00 IST
Last Updated 4 ಫೆಬ್ರುವರಿ 2024, 6:00 IST
ಅಕ್ಷರ ಗಾತ್ರ

ಹಂಪಿ (ವಿಜಯನಗರ): ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷೇಶ್ವರ ದೇಗುಲ ಮುಂಭಾಗದ ರಾಜ ಬೀದಿಯಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ನೋಡುಗರ ಕಣ್ಮನ ಸೆಳೆಯಿತು. ಗೋಪುರದ ಮುಂಭಾಗದ ರಸ್ತೆ ವರ್ಣಮಾಯವಾಗಿ ಉತ್ಸವಕ್ಕೆ ಬಂದವರನ್ನು ಸ್ವಾಗತಿಸಿತು.

ಮಹಿಳೆಯರು ದೇವರ ಚಿತ್ರಗಳು, ವಿರೂಪಾಕ್ಷೇಕ್ಷರ ಗೋಪುರ ಸೇರಿ ವಿವಿಧ ,ರಥ, ನಕ್ಷೆ, ನಾನಾ ಬಗೆಯ ಹೂವಿನ ಚಿತ್ರ ಸೇರಿದಂತೆ ನಯನ ಮನೋಹರ ರಂಗೋಲಿಗಳ ಚಿತ್ತಾರ ಹಾಕಿ ಬಣ್ಣತುಂಬಿ, ಹೂಗಳನ್ನಿಟ್ಟು ಅವುಗಳ ಅಂದ ಹೆಚ್ಚಿಸಿದರು. ವಿದೇಶಿಗರು ವಿಶೇಷವಾಗಿ ಅವುಗಳ ಛಾಯಚಿತ್ರ ಕ್ಲಿಕ್ಕಿಸಿ ಸಂಭ್ರಮಿಸಿದರು.

ರಸ್ತೆ ಮೇಲೆ ಅರಳಿದ ರಂಗೋಲಿಗಳ ಚಿತ್ತಾರ ನೋಡಿ ಉತ್ಸವಕ್ಕೆ ಬಂದಿದ್ದ ಪ್ರವಾಸಿಗರು ಸಂತಸಗೊಂಡರು. ವಿದೇಶಿಗರು ಸೇರಿ ಗ್ರಾಮೀಣ ಭಾಗದಿಂದ ಬಂದಂತಹ ಪ್ರವಾಸಿಗರನ್ನು ರಂಗೋಲಿಗಳು ಅಕರ್ಷಿಸಿದವು.

ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷಸ್ವಾಮಿ ರಾಜಗೋಪುರ ಬೀದಿಯಲ್ಲಿ ಹಾಕಿದ್ದ ರಂಗೋಲಿಗಳನ್ನು ಜನರು ವೀಕ್ಷಿಸಿದರು
ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವಿರೂಪಾಕ್ಷಸ್ವಾಮಿ ರಾಜಗೋಪುರ ಬೀದಿಯಲ್ಲಿ ಹಾಕಿದ್ದ ರಂಗೋಲಿಗಳನ್ನು ಜನರು ವೀಕ್ಷಿಸಿದರು

ಜಿಲ್ಲಾಧಿಕಾರಿ ಎಂ.ದಿವಾಕರ್ ರಂಗೋಲಿಗಳನ್ನು ವೀಕ್ಷಿಸಿದರು. ಸ್ಪರ್ಧೆಯಲ್ಲಿ 74 ಮಹಿಳೆಯರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT