ಹೊಸಪೇಟೆಯಲ್ಲಿ ಬಿರುಸಿನ ಮಳೆ; ಜನಜೀವನ ಅಸ್ತವ್ಯಸ್ತ

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಹಲವು ಭಾಗಗಳಲ್ಲಿ ಶನಿವಾರ ಬಿರುಸಿನ ಮಳೆಯಾಗಿದೆ.
ಬೆಳಿಗ್ಗೆಯಿಂದಲೇ ಕಾರ್ಮೋಡ ಕವಿದಿತ್ತು. ಮಧ್ಯಾಹ್ನ ಕೆಲಸಮಯ ಜಿಟಿಜಿಟಿ ಮಳೆಯಾಯಿತು. ಸಂಜೆಯ ವರೆಗೆ ಬಿಡುವು ಕೊಟ್ಟ ವರುಣ, ಬಳಿಕ ತನ್ನ ಆರ್ಭಟ ತೋರಿಸಿದ.
PHOTOS | ಹೊಸಪೇಟೆಯಲ್ಲಿ ತಂಪೆರೆದ ಮಳೆ, ವಾಹನ ಸಂಚಾರರ ಪರದಾಟ
ಎರಡು ಗಂಟೆಗೂ ಹೆಚ್ಚು ಸಮಯ ಸುರಿದ ಬಿರುಸಿನ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತು. ಇದರಿಂದಾಗಿ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಿದವು. ಜನಜೀವನ ಅಸ್ತವ್ಯಸ್ತಗೊಂಡಿತು.
ನಗರದ ಕಾಲೇಜು ರಸ್ತೆ, ಸಾಯಿಬಾಬಾ ವೃತ್ತ, ಟಿ.ಬಿ. ಡ್ಯಾಂ ರಸ್ತೆ, ಸಂಡೂರು ರಸ್ತೆಯಲ್ಲಿ ಅಪಾರ ನೀರು ಜಮಾವಣೆಗೊಂಡಿತು.
ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರಿನಲ್ಲೂ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.