ಹೊಸಪೇಟೆ: ಹೊಸಪೇಟೆ ನಗರಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಒಲಿದಿದೆ.
ಗುರುವಾರ ನಡೆದ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷರಾಗಿ ಎನ್.ರೂಪೇಶ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ರಮೇಶ್ ಗುಪ್ತ ಆಯ್ಕೆಯಾದರು. ಸಂಸದ ಇ.ತುಕಾರಾಂ, ಶಾಸಕ ಎಚ್.ಆರ್. ಗವಿಯಪ್ಪ ಅವರು ಪರ ಮತ ಚಲಾಯಿಸಿದರೂ ಕಾಂಗ್ರೆಸ್‌ಗೆ ಗೆಲುವು ದಕ್ಕಲಿಲ್ಲ.
ನಗರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 10, ಒಬ್ಬ ಎಎಪಿ ಸದಸ್ಯ ಸಹಿತ 13 ಪಕ್ಷೇತರ ಸದಸ್ಯರಿದ್ದಾರೆ. ಎಎಪಿ ಸದಸ್ಯ ಮತ್ತು ಮೂವರು ಪಕ್ಷೇತರರ ಸೆಳೆಯಲು ಕಾಂಗ್ರೆಸ್ ಸಫಲವಾಯಿತು ಮತ್ತು ಪಕ್ಷದ ಸದಸ್ಯರೊಬ್ಬರು ಗೈರಾಗಿದ್ದರು. ಹೀಗಾಗಿ 2 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಯಿತು.