ಹೊಸಪೇಟೆ (ವಿಜಯನಗರ): ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ನಗರದ ಇಬ್ಬರು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.

ಕಾರದಪುಡಿ ಮಹೇಶ್ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆಗಳು, ಕಚೇರಿಗಳ ಮೇಲೆ ಬೆಳಿಗ್ಗೆ 5.30ರಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ಅದು ಸಂಜೆಯತನಕವೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಾರದಪುಡಿ ಮಹೇಶ್ ಅವರು ನಗರಸಭಾ ಸದಸ್ಯರೂ ಆಗಿದ್ದು, ಜೆ.ಪಿ.ನಗರದಲ್ಲಿ ಅವರ ಮನೆ ಇದೆ. ಬಳ್ಳಾರಿ ಸರ್ಕಲ್ನಲ್ಲಿ ‘ಸರ್ವ ಜನ ಸುಖಿನೋ ಭವಂತು’ ಎಂಬ ಉಚಿತ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವರು ಹೊಂದಿದ್ದು, ಅಲ್ಲಿ ಅವರಿಗೆ ಸಂಬಂಧಿಸಿದ ಕಚೇರಿ, ಸ್ಟೀಲ್ ಅಂಗಡಿಯೂ ಇದೆ. ಈ ಮೂರೂ ಕಡೆ ಇ.ಡಿ ಯಿಂದ ಪರಿಶೀಲನೆ ನಡೆಯುತ್ತಿದೆ.

ಸ್ವಸ್ತಿಕ್ ನಾಗರಾಜ್ ಅವರ ಮನೆ ರಾಜೀವ್ ನಗರದಲ್ಲಿದ್ದು, ಎಪಿಎಂಸಿ ಬಳಿ ಅವರ ಕಚೇರಿ ಮತ್ತು ಸ್ಟೀಲ್ ಅಂಗಡಿ ಇದೆ. ಈ ಮೂರು ಕಡೆಗಳಲ್ಲಿ ಸಹ ಅಧಿಕಾರಿಗಳಿಂದ ತಪಾಸಣೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.