ನಂದಿಹಳ್ಳಿ ರಸ್ತೆ ಹಾಳು | ವಾಹನಗಳ ಹಿಂದೆ ಚಿಮ್ಮುವ ದೂಳು: ತಪ್ಪದ ಗೋಳು
ಕೆ. ಸೋಮಶೇಖರ
Published : 24 ಜನವರಿ 2026, 2:01 IST
Last Updated : 24 ಜನವರಿ 2026, 2:01 IST
ಫಾಲೋ ಮಾಡಿ
Comments
ನಂದಿಹಳ್ಳಿ ಸಂಪರ್ಕ ರಸ್ತೆಯಲ್ಲಿ ಡಾಂಬಾರ್ ಪದರು ಕಿತ್ತು ಗುಂಡಿ ಬಿದ್ದಿರುವುದು
ಕ್ರಿಯಾ ಯೋಜನೆಯನ್ನು ತಾಂತ್ರಿಕ ಅನುಮೋದನೆಗೆ ಕಳಿಸಲಾಗಿದೆ. ನಂದಿಹಳ್ಳಿ ರಸ್ತೆ ನಿರ್ಮಾಣ ಕೆಲಸ ಮುಂದಿನ ತಿಂಗಳು ಪ್ರಾರಂಭವಾಗುವ ನಿರೀಕ್ಷೆ ಇದೆ
ಕುಬೇಂದ್ರನಾಯ್ಕ ಪ್ರಭಾರ ಎಇಇ ಪಿಆರ್‌ಇ ಉಪ ವಿಭಾಗ ಹಡಗಲಿ
ನಂದಿಹಳ್ಳಿ ರಸ್ತೆ ಹದಗೆಟ್ಟು ಹೋಗಿದೆ. ಹಿಂದಿನ ಈಗಿನ ಶಾಸಕರು ಭೂಮಿಪೂಜೆ ಮಾಡಿದ್ದಾರೆ ಹೊರತು ಕೆಲಸ ಪ್ರಾರಂಭಿಸಿಲ್ಲ
ಕಮತರ ಕೊಟ್ರೇಶ ನಂದಿಹಳ್ಳಿ ನಿವಾಸಿ
4 ತಿಂಗಳಾದರೂ ಆರಂಭವಾಗದ ಕಾಮಗಾರಿ
ನಂದಿಹಳ್ಳಿ ಸಂಪರ್ಕ ರಸ್ತೆಯನ್ನು ₹3 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎಲ್.ಕೃಷ್ಣನಾಯ್ಕ ಭೂಮಿಪೂಜೆ ನೆರವೇರಿಸಿ ನಾಲ್ಕು ತಿಂಗಳಾಗಿದೆ. ಇನ್ನೂ ಕಾಮಗಾರಿ ಆರಂಭವಾಗಿಲ್ಲ. 2022ರಲ್ಲಿ ಹಿಂದಿನ ಶಾಸಕರು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರೂ ಕೆಲಸ ಪ್ರಾರಂಭವಾಗಿರಲಿಲ್ಲ. ಹೀಗಾಗಿ ಜನಪ್ರತಿನಿಧಿಗಳ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.