ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ವಿಜಯನಗರದಲ್ಲಿ ಕಾಟಾಚಾರದ ವಿಮೋಚನಾ ದಿನ

Last Updated 17 ಸೆಪ್ಟೆಂಬರ್ 2021, 4:08 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಕಾಟಾಚಾರಕ್ಕೆ ಶುಕ್ರವಾರ ಇಲ್ಲಿ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ದಿನ ಕಂಡು ಬರುವ ಸಂಭ್ರಮ ಇರಲಿಲ್ಲ. ಗಣ್ಯರು, ಸಾರ್ವಜನಿಕರಿಗೆ ಹಾಕಿದ್ದ ಆಸನಗಳು ಖಾಲಿ ಇದ್ದವು. ಗ್ಯಾಲರಿಗಳಲ್ಲೂ ಜನರು ಇರಲಿಲ್ಲ. ಜನರಿಲ್ಲದೇ ಕ್ರೀಡಾಂಗಣ ಬಿಕೋ ಎನ್ನುತ್ತಿತ್ತು. ಗೃಹರಕ್ಷಕ ಹಾಗೂ ಪೊಲೀಸ್ ಇಲಾಖೆಯ ಒಂದು ತುಕಡಿ ಮಾತ್ರ ಇತ್ತು.

ಜನರಿಲ್ಲದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ಭಾಷಣ ಓದಿದರು.

ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್ ಪಿ. ಶ್ರವಣ್, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ಎಚ. ವಿಶ್ವನಾಥ್, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇದ್ದರು. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ.

ಸಾರ್ವಜನಿಕರಿಗೆ ಹಾಕಿದ್ದ ಆಸನಗಳು ಖಾಲಿ ಇರುವ ದೃಶ್ಯ
ಸಾರ್ವಜನಿಕರಿಗೆ ಹಾಕಿದ್ದ ಆಸನಗಳು ಖಾಲಿ ಇರುವ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT