ಮಂಗಳವಾರ, ಜುಲೈ 5, 2022
21 °C
ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

ಕಮಲಾಪುರ ಪುರಸಭೆಯಾಗಿ ಮೇಲ್ದರ್ಜೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಬುಧವಾರ (ಏ.20) ಅಧಿಸೂಚನೆ ಹೊರಡಿಸಿದೆ.

ಯಾವುದೇ ರೀತಿಯ ಆಕ್ಷೇಪಣೆ/ಸಲಹೆಗಳನ್ನು ಅಧಿಸೂಚನೆ ಹೊರಡಿಸಿದ 30 ದಿನಗಳ ಒಳಗೆ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ. ಗೋಪುರ, ಬೆಂಗಳೂರು ಇವರಿಗೆ ಸಲ್ಲಿಸಬೇಕೆಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಲ್‌. ಪ್ರಸಾದ್‌ ತಿಳಿಸಿದ್ದಾರೆ.

ಕಮಲಾಪುರ ಪಟ್ಟಣದ ಪೂರ್ವಕ್ಕೆ ವೆಂಕಟಾಪುರ, ಸೀತಾರಾಂ‍ಪುರ ಗ್ರಾಮ, ಪಶ್ಚಿಮದಲ್ಲಿ ಕೊಂಡನಾಯಕನಹಳ್ಳಿ, ಮಾಗೇನಹಳ್ಳಿ, ಗುಡಿ ಓಬಳಾಪುರ, ಉತ್ತರದಲ್ಲಿ 82 ದಂಡಾಪುರ ಗ್ರಾಮ ಹಾಗೂ ದಕ್ಷಿಣದಲ್ಲಿ ಬೈಲುವದ್ದಿಗೇರಿ, ಸೀತಾರಾಂಪುರ ಗ್ರಾಮದ ವರೆಗೆ ಗಡಿ ಗುರುತಿಸಲಾಗಿದ್ದು, ಪುರಸಭೆಯ ವ್ಯಾಪ್ತಿಯ ಅಲ್ಲಿಯವರೆಗೆ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು