ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನಹೊಸಹಳ್ಳಿ: ಪ್ರಯಾಣಿಕರು, ಕಂಡಕ್ಟರ್ ನಡುವೆ ವಾಗ್ವಾದ

Published 9 ಮೇ 2024, 14:35 IST
Last Updated 9 ಮೇ 2024, 14:35 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ‘ಬಸ್ ಸಂಪೂರ್ಣ ಭರ್ತಿಯಾಗಿದ್ದು, ಬದಲಿ ಬಸ್‌ಗೆ ಬನ್ನಿ’ ಎಂದು ಕಂಡಕ್ಟರ್ ಹೇಳಿದಕ್ಕೆ, ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಗಲಾಟೆಯಾಗಿರುವ ಘಟನೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

ಬಾಗಲಕೋಟೆಯಿಂದ ಬೆಂಗಳೂರಿಗೆ ಹೊರಟಿದ್ದ ಬಸ್, ಕಾನಹೊಸಹಳ್ಳಿ ಬಸ್ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಕಾನಹೊಸಹಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದ ಐವರು ಪ್ರಯಾಣಿಕರು ಬಸ್ ಹತ್ತಲು ಮುಂದಾದ ವೇಳೆ ಗಲಾಟೆ ನಡೆದಿದೆ. 

ಈ ವೇಳೆ ಪ್ರಯಾಣಿಕರು ಕಂಡಕ್ಟರ್ ಕೊರಳಪಟ್ಟಿ ಹಿಡಿಯಲು ಮುಂದಾಗಿದ್ದರಿಂದ ಬಸ್‌ ನಿಲ್ದಾಣದ ಕಂಟ್ರೋಲರ್‌ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ಅಪರಾಧ ವಿಭಾಗದ ಪಿಎಸ್ಐ ನಾಗರಾಜ್, ಎಎಸ್ಐ ಜಿಲಾನ್ ಬಾಷಾ ಆಗಮಿಸಿ ಜಗಳ ಬಿಡಿಸಿದ್ದಾರೆ. ಬಳಿಕ ಪ್ರಯಾಣಿಕರನ್ನು ಬೇರೆ ಬಸ್‌ ಮೂಲಕ ಬೆಂಗಳೂರಿಗೆ ಕಳುಹಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT