ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ ಕೊಡುಗೆ ದೊಡ್ಡದು’

Last Updated 28 ನವೆಂಬರ್ 2022, 15:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಭಾಷೆಯ ಕೊಡುಗೆ ಬಹಳ ದೊಡ್ಡದಿದೆ’ ಎಂದು ಸಾಹಿತಿ ಚಂದ್ರಶೇಖರ್‌ ರೋಣದಮಠ ತಿಳಿಸಿದರು.

ಪ್ರಿಯದರ್ಶಿನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ವಾಹಿನಿ ಅಭಿವೃದ್ಧಿ ಸಂಸ್ಥೆ, ಗೃಹರಕ್ಷಕ ದಳದ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿ, ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನೇಕ ಶತಮಾನಗಳ ಹಿಂದೆಯೇ ಕನ್ನಡ ಪದಗಳು ಹುಟ್ಟಿವೆ. ಬಳಿಕ ಅದನ್ನು ಶರಣರು, ರನ್ನ, ಪೊನ್ನ, ಪಂಪ, ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಮಹನೀಯರು ಎತ್ತರಕ್ಕೆ ಬೆಳೆಸಿದರು. ಇವರ ಕೊಡುಗೆಯಿಂದ ಜಗತ್ತಿನಲ್ಲೇ ಕನ್ನಡ ಸಾಹಿತ್ಯಕ್ಕೆ ವಿಶೇಷ ಗೌರವ, ಸ್ಥಾನಮಾನವಿದೆ ಎಂದರು.

ಪ್ರಿಯದರ್ಶಿನಿ ಸಂಸ್ಥೆಯ ಡಾ. ಸುಲೋಚನಾ ಮಾತನಾಡಿ, ನಮ್ಮ ಸಂಸ್ಥೆಯು ಪ್ರತಿ ವರ್ಷ ಎಲೆಮರೆಕಾಯಿಯ ಹಾಗೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಗ್ರಂಥಪಾಲಕಿ ಸುಜಾತ ರೇವಣಸಿದ್ದಪ್ಪ ಮಾತನಾಡಿ, ಕನ್ನಡ ಸೇವೆ ಮಾಡುವುದು ಅಂದರೆ ಕನ್ನಡ ಪುಸ್ತಕಗಳನ್ನು ಓದುವುದು ಎಂದರು.

18 ಕವಿಗಳು ಕವನ ವಾಚನ ಮಾಡಿದರು. ಗೃಹರಕ್ಷಕ ದಳದ ಎಸ್‌.ಎಂ. ಗಿರೀಶ್‌, ಸಮಾಜ ಸೇವಕ ಗುಂಡಿ ರಮೇಶ್, ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಕೊಟ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಲೇಖಕಿ ನಾಗಪುಷ್ಪಲತಾ, ಎಂ.ಎಚ್. ಕಲಾದಗಿ, ರೈತ ಮುಖಂಡ ಘಂಟೆ ಸೋಮಶೇಖರ್, ನಿರ್ದೇಶಕ ಪಿ. ವಸಂತಕುಮಾರ್‌, ಲೇಖಕರಾದ ಮಹಾಲಕ್ಷ್ಮಿ, ಪರಶುರಾಮ, ಶಿವುಕುಮಾರ್‌, ಅಂಜಲಿ ಬೆಳಗಲ್‌, ನೂರ್ ಜಹಾನ್, ಉಮಾಮಹೇಶ್ವರ, ಎಚ್.ಎಂ. ಜಂಬುನಾಥ್, ಗೋವಿಂದ, ಶೋಭಾ ಶಂಕರಾನಂದ, ಯರ್ರಿಸ್ವಾಮಿ, ಪ್ರಹ್ಲಾದ್ ರಾವ್, ವಿ.ಪರಶುರಾಮ್, ಗೀತಾ ಸುರೇಶ್, ಅಮನ್, ವಾಲ್ಯಾ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT