ಹೂವಿನಹಡಗಲಿ: ಐತಿಹಾಸಿಕ ಸುಪ್ರಸಿದ್ಧ ಮೈಲಾರ ಸುಕ್ಷೇತ್ರವನ್ನು ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ನಿರ್ಲಕ್ಷಿಸಿದೆ ಎಂಬ ಭಾವನೆ ಭಕ್ತರಲ್ಲಿ ಮೂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮೈಲಾರ ಜಾತ್ರಾ ಸಿದ್ದತಾ ಸಭೆಗಳಲ್ಲಿ ಒಮ್ಮೆಯೂ ಭಾಗವಹಿಸಿಲ್ಲ. ಸುಕ್ಷೇತ್ರ ಅಭಿವೃದ್ಧಿಗೂ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಹಿಂದೆ ಉಸ್ತುವಾರಿ ಸಚಿವರು ಖುದ್ದಾಗಿ ಜಾತ್ರಾ ಸಿದ್ಧತಾ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಮೂಲಸೌಕರ್ಯ, ಭದ್ರತೆಯ ರೂಪುರೇಷೆಯನ್ನು ಸಭೆಯಲ್ಲೇ ಸಿದ್ಧಪಡಿಸಿ ಇಲಾಖಾ ಮುಖ್ಯಸ್ಥರ ನೇತೃತ್ವದ ಸಮಿತಿ, ಉಪ ಸಮಿತಿಗಳಿಗೆ ವಹಿಸುತ್ತಿದ್ದರು. ‘ಇಂತಹ ಮಹತ್ವದ ಸಭೆಗಳಿಗೆ ಉಸ್ತುವಾರಿ ಸಚಿವರು ಗೈರಾಗುತ್ತಿರುವುದರಿಂದ ಸಿದ್ಧತಾ ಸಭೆಗಳು ಕಾಟಾಚಾರದಂತೆ ನಡೆಯುತ್ತಿವೆ. ಸ್ಥಳೀಯರು, ಹೊರಗಿನ ಭಕ್ತರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಎರಡನೇ ಅತೀ ದೊಡ್ಡ ಜಾತ್ರೆಯಾಗಿರುವ ಮೈಲಾರ ಜಾತ್ರೆಗೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಅಷ್ಟೊಂದು ಭಕ್ತ ಪರಿಷೆಗೆ ಮೂಲಸೌಕರ್ಯ ಕಲ್ಪಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು. ಎಷ್ಟೇ ಮುತುವರ್ಜಿ ವಹಿಸಿದರೂ ಜನರು ನಾನಾ ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ.

ಈಗಂತೂ ಮೈಲಾರ ಸುತ್ತ ಸಮಸ್ಯೆಗಳೇ ಸುತ್ತಿಕೊಂಡಿವೆ. ಮೈಲಾರ– ತೋರಣಗಲ್ಲು ರಾಜ್ಯ ಹೆದ್ದಾರಿ ತುಂಬಾ ಗುಂಡಿಗಳು ಬಿದ್ದಿವೆ. ತಿಪ್ಪಾಪುರದಿಂದ ಹಿರೇಹಡಗಲಿವರೆಗೆ ಮಾತ್ರ ರಸ್ತೆಯ ಆಯ್ದ ಭಾಗ ದುರಸ್ತಿ ಕಾರ್ಯ ಈಗ ಆರಂಭವಾಗಿದೆ. ಉಳಿದೆಲ್ಲ ರಸ್ತೆಗಳು ಹದಗೆಟ್ಟಿವೆ. ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಭಾನುವಾರ, ಗುರುವಾರ, ಹುಣ್ಣಿಮೆಯ ವಿಶೇಷ ದಿನಗಳಂದು ಟ್ರಾಫಿಕ್ ಕಿರಿಕಿರಿ ಅನುಭವಿಸಿ ಸಾಕಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಬರೀ ಜಾತ್ರೆ ಕೇಂದ್ರಿತವಾಗಿ ಮಾತ್ರ ಮೂಲಸೌಕರ್ಯ ಕಲ್ಪಿಸಿ ಕೈ ತೊಳೆದುಕೊಳ್ಳುತ್ತದೆ. ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದಿರುವುದರಿಂದ ಅಭಿವೃದ್ಧಿಯಲ್ಲಿ ಸುಕ್ಷೇತ್ರ ಹಿಂದುಳಿದಿದೆ. ರಸ್ತೆ ಅಭಿವೃದ್ಧಿ, ಇನ್ನಿತರೆ ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ಮಂಜೂರು ಮಾಡಬೇಕಿರುವ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಐತಿಹಾಸಿಕ ಸುಕ್ಷೇತ್ರ ಇರುವುದನ್ನು ಮರೆತಿದ್ದಾರೆಯೇ ಎಂಬುದು ಜನರ ಪ್ರಶ್ನೆ.

ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಮೈಲಾರ ಜಾತ್ರೆಯನ್ನು ಸರ್ಕಾರ ನಿರ್ಲಕ್ಷಿಸಬಾರದು. ಉಸ್ತುವಾರಿ ಸಚಿವರು ಗಮನಹರಿಸಿ ರಸ್ತೆ ಅಭಿವೃದ್ಧಿ ಮೂಲಸೌಕರ್ಯಗಳಿಗೆ ಅನುದಾನ ನೀಡಬೇಕು
ಎಂ.ಬಿ. ಕೋರಿ ಮೈಲಾರ ನಿವಾಸಿ