ಹಗರಿಬೊಮ್ಮನಹಳ್ಳಿ/ಹೊಸಪೇಟೆ (ವಿಜಯನಗರ ಜಿಲ್ಲೆ): ಮಾಲವಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅದರ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮ ಇಲ್ಲಿನ ಜಿ.ಬಿ. ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಇದೀಗ ಆರಂಭಗೊಂಡಿದೆ.

ಸಿದ್ದರಾಮಯ್ಯನವರು ಸಿ.ಎಂ. ಇದ್ದಾಗ ಜಲಾಶಯದ ಅಭಿವೃದ್ಧಿಗೆ ₹153 ಕೋಟಿ ಅನುದಾನ ನೀಡಿದ್ದರು. 13 ವರ್ಷದ ನಂತರ ಜಲಾಶಯ ತುಂಬಿರುವುದರಿಂದ ಅದಕ್ಕೆ ಬಾಗಿನ ಸಮರ್ಪಿಸಿ, ರೋಡ್ ಷೋನಡೆಸಿದರು. ಈಗ ಪಟ್ಟಣದಲ್ಲಿ ಏರ್ಪಡಿಸಿರುವ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಪಾರ ಸಂಖ್ಯೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಡೀ ಮೈದಾನ ಭರ್ತಿಯಾಗಿದೆ.

ಸಿದ್ದೇಶ್ವರ ಶ್ರೀಗೆ ಗೌರವ:
ಸೋಮವಾರ ರಾತ್ರಿ ನಿಧನರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಕಾರ್ಯಕ್ರಮದ ಆರಂಭದಲ್ಲಿ ಎರಡು ನಿಮಿಷ ಮೌನ ಆಚರಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಶಾಸಕರಾದ ಈ. ತುಕಾರಾಂ, ರಾಘವೇಂದ್ರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಜಮೀರ್ ಅಹಮ್ಮದ್ ಖಾನ್, ಬೈರತಿ ಸುರೇಶ್, ಮುಖಂಡರಾದ ವಿ.ಎಸ್. ಉಗ್ರಪ್ಪ, ಸಂತೋಷ್ ಲಾಡ್, ಹಾಲಪ್ಪ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ನಗರ ಅಧ್ಯಕ್ಷ ಮಹಮ್ಮದ್ ರಫೀಕ್, ಸಿರಾಜ್ ಶೇಖ್, ಹಾಲಪ್ಪ, ಸಿದ್ದನಗೌಡ, ಮಹಮ್ಮದ್ ಇಮಾಮ್ ನಿಯಾಜಿ, ಕುರಿ ಶಿವಮೂರ್ತಿ, ಅಕ್ಕಿ ತೋಟೇಶ್ ಇತರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.