ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಬೇಸರ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಅವರು ಏನೂ ತಪ್ಪು ಮಾಡಿಲ್ಲ, ಅವರು ಹಣದ ಮೋಹ ಇರುವವರೇ ಅಲ್ಲ ಎಂದಿದ್ದಾರೆ.

ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಮಂಗಳವಾರ ಇಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ತಪ್ಪೂ ಮಾಡಿಲ್ಲ, ಅವರು ವ್ಯವಹಾರಸ್ಥ ಅಲ್ಲ; ಅವರು ಹಣದ ಮೋಹ ಇರುವ ವ್ಯಕ್ತಿಯೇ ಅಲ್ಲ, ಅವರ ಜೀವನ ಜನಸೇವೆಗೇ ಮುಡಿಪಾಗಿದೆ’ ಎಂದರು.

‘ನಾನು 1994ರಿಂದಲೂ ಸಿದ್ದರಾಮಯ್ಯ ಅವರನ್ನು ನೋಡುತ್ತ ಇದ್ದೇನೆ. ಸಮಾಜ ಸೇವೆ, ಜನ ಸೇವೆ ಹೊರತು ಅವರಿಗೆ ಬೇರೇನೂ ಗೊತ್ತಿಲ್ಲ. ಒಳ್ಳೆಯ ವ್ಯಕ್ತಿಯ ಹೆಸರಿಗೆ ಹಾನಿ ಮಾಡಬೇಕು ಎಂಬುದೇ ವಿರೋಧ ಪಕ್ಷಗಳ ಉದ್ದೇಶ ಇದ್ದಂತಿದೆ. ಅವರು ಏನೂ ತಪ್ಪು ಮಾಡಿಲ್ಲವಾದ ಕಾರಣ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಈ ಕೋರ್ಟ್ ತೀರ್ಪಿನ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ’ ಎಂದರು ಗವಿಯಪ್ಪ ಹೇಳಿದರು.

‘ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ. ಆದರೆ ಇದೀಗ ಅವರ ಮೇಲೆ ಕಪ್ಪು ಚುಕ್ಕೆ ಇಡೋ ಕೆಲಸ ಮಾಡಲಾಗುತ್ತಿದೆ. ಅವರು ಎಂದೂ ಹಣ, ವ್ಯವಹಾರ ಅಂತ ಓಡಾಡಿದವರಲ್ಲ. ನಿನ್ನ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕು, ಕೇಳು, ತಗೋ ಅನುದಾನ ಅಂತ ಮಂಜೂರು ಮಾಡ್ತಾರೆ ಅಷ್ಟೆ, ಬೇರೆ ಯಾವ ವಿಚಾರವನ್ನೂ ಅವರು ಎಂದಿಗೂ ಚರ್ಚಿಸಿದವರಲ್ಲ. ‘ಮುಡಾ’ದಲ್ಲಿ ಸಣ್ಣಪುಟ್ಟ ತಪ್ಪುಗಳು ಆಗಿರಬಹುದು, ಹಾಗಂತ ಸಿಎಂ ಅವರೇ ತಪ್ಪು ಮಾಡಿಲ್ಲ’ ಎಂದು ಅಭಿಪ್ರಾಯಪಟ್ಟರು.

ಮುನಿಸು ಮಾಯ: ಎರಡು ದಿನದ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲು ಹೊಸಪೇಟೆ ಸಮೀಪ ಬಂದಿದ್ದರು. ಆಗ ಶಾಸಕ ಗವಿಯಪ್ಪ ಅವರ ಬೆಂಬಲಿಗರು ಮತ್ತು ಕೆಲವು ರೈತ ಮುಖಂಡರನ್ನು ಶಾಸಕರ ಜತೆಗೆ ಅಣೆಕಟ್ಟೆ ಪ್ರದೇಶಕ್ಕೆ ಬಿಟ್ಟಿರಲಿಲ್ಲ. ಇದರಿಂದ ಸಿಟ್ಟುಗೊಂಡಿದ್ದ ಶಾಸಕರು ಮುಖ್ಯಮಂತ್ರಿ ಅವರು ಬಾಗಿನ ಅರ್ಪಿಸುವಾಗ ಗೈರಾಗಿ ತಮ್ಮ ಬಂಡಾಯ ಪ್ರದರ್ಶಿಸಿದ್ದರು.

ಮುಖ್ಯಮಂತ್ರಿ ಅವರು ಹೊಸಪೇಟೆಗೆ ಬಂದು ಹೋದ ಬಳಿಕ ಪ್ರತಿಕ್ರಿಯಿಸಿದ್ದ ಶಾಸಕ ಗವಿಯಪ್ಪ, ‘ಬಾಗಿನ ಅರ್ಪಿಸುವುದು ರೈತರ ಹಬ್ಬವಾಗಿತ್ತು. ಅವರನ್ನೇ ದೂರ ಇಟ್ಟದ್ದು ನನಗೆ ಸರಿ ಕಾಣಲಿಲ್ಲ’ ಎಂದು ಹೇಳಿದ್ದರು ಹಾಗೂ ತಮ್ಮ ಕ್ಷೇತ್ರದ ಕಡೆಗಣನೆ ಆಗಿದೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಅವರ ವಿರುದ್ಧ ಪರೋಕ್ಷವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ತಕ್ಷಣ ರಾಜೀನಾಮೆಗೆ ಬಿಜೆಪಿ ಆಗ್ರಹ

ಹೊಸಪೇಟೆ: ‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಗ್ಗೆ ಬಿಜೆಪಿ ಮೊದಲಿನಿಂದಲೂ ಹೇಳುತ್ತ ಬಂದಿತ್ತು. ಕೋರ್ಟ್ ತೀರ್ಪು ಪಕ್ಷದ ನಿಲುವನ್ನು ಸಾಬೀತುಪಡಿಸಿದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಒತ್ತಾಯಿಸಿದರು. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಅವರಿಗೆ ಅಭದ್ರತೆ ಕಾಡುತ್ತಿದೆ ಶಾಸಕರು ಸಚಿವರು ಹೇಳುವ ಬದಲಿಗೆ ತಮಗೆ ಎಲ್ಲರ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಪಕ್ಷದಲ್ಲಿ ಈಗಾಗಲೇ ನಾಯಕತ್ವಕ್ಕಾಗಿ ಬಡಿದಾಟ ಆರಂಭವಾಗಿದೆ. ಜನ ಇನ್ನಷ್ಟು ದೂಷಿಸುವ ಮೊದಲು ರಾಜೀನಾಮೆ ಕೊಟ್ಟು ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಬಹುದು ಈಗ ಮಾತ್ರ ಅವರು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ’ ಎಂದರು. ‘ಪಿತೃಪಕ್ಷದಲ್ಲಿ ತುಂಗಭದ್ರೆಗೆ ಬಾಗಿನ ಅರ್ಪಿಸಿದರೆ ಕೇಡು ನಿಶ್ಚಿತ ಎಂದು ನಾನು ಎರಡು ದಿನದ ಹಿಂದೆಯೇ ಹೇಳಿದ್ದೆ. ಅದರು ಈಗ ನಿಜವಾಗಿದೆ’ ಎಂದರು. ಅಭಿವೃದ್ಧಿಯೇ ಇಲ್ಲ: ‘ಬಿಜೆಪಿ ಜೆಡಿಎಸ್ ಪಕ್ಷಗಳು ಈ ಸರ್ಕಾರವನ್ನು ಕೆಡಹುವ ಪ್ರಶ್ನೆಯೇ ಇಲ್ಲ. ಏಕೆಂದರೆ ಸರ್ಕಾರದ ಕಾರ್ಯವಿಧಾನದಿಂದ ಕಾಂಗ್ರೆಸ್ ಶಾಸಕರೇ ತೀವ್ರ ಅಸಮಾಧಾನಗೊಂಡಿದ್ದಾರೆ. ಯಾವ ಕ್ಷೇತ್ರದಲ್ಲೂ ಅಭಿವೃದ್ಧಿಗೆ ಹಣ ಇಲ್ಲ’ ಎಂದರು. ಪಕ್ಷದ ಮುಖಂಡರಾದ ಅಯ್ಯಾಳಿ ತಿಮ್ಮಪ್ಪ ಬಲ್ಲಾಹುಣ್ಸಿ ರಾಮಣ್ಣ ಅಶೋಕ್ ಜೀರೆ ಕೆ.ಎಸ್.ರಾಘವೇಂದ್ರ ಕಿಚಡಿ ಕೊಟ್ರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.