ಹೊಸಪೇಟೆ (ವಿಜಯನಗರ): ಹಂಪಿಯನ್ನು ಆಗಸದಿಂದ ನೋಡುವುದು ವಿಶಿಷ್ಟ ಅನುಭವ, ಅದನ್ನು ಪ್ರವಾಸಿಗರು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ಹಂಪಿಯಲ್ಲಿ ಶನಿವಾರ ಹಂಪಿ ಉತ್ಸವ ಪ್ರಯುಕ್ತ 'ಹಂಪಿ ಬೈ ಸ್ಕೈ' ಹೆಲಿಕಾಪ್ಟರ್ ಹಾರಾಟಕ್ಕೆ ಶಾಸಕ ಎಚ್. ಆರ್.ಗವಿಯಪ್ಪ ಅವರ ಜತೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತರೆಡೆ ನಡೆಯುವ ಜಾತ್ರೆ, ಉತ್ಸವಗಳಂತಲ್ಲ ಹಂಪಿಯ ಪರಿಸರ, ಆಗಸದಿಂದ ಹಂಪಿಯನ್ನು ನೋಡುವುದರಿಂದ ಆಗುವ ಅನುಭೂತಿಯೇ ವಿಶಿಷ್ಟವಾದುದು ಎಂದರು.

ಶಾಸಕ ಗವಿಯಪ್ಪ ಮಾತನಾಡಿ, ಮಾರ್ಚ್ 3ರವರೆಗೆ ಈ ಹೆಲಿಕಾಪ್ಟರ್ ಹಾರಾಟ ಇರಲಿದೆ, ಎರಡು ಹೆಲಿಕಾಪ್ಟರ್ಗಳಿವೆ. ಸಾರ್ವಜನಿಕರು ಈ ಅವಕಾಶ ಬಳಸಬೇಕು ಎಂದರು.

ದರವೆಷ್ಟು?

ಒಬ್ಬರಿಗೆ 7 ನಿಮಿಷದ ಹಾರಾಟಕ್ಕೆ ₹3,900 ದರ ನಿಗದಿಪಡಿಸಲಾಗಿದೆ. ಕಳೆದ ವರ್ಷ ₹4,000 ದರ ಇತ್ತು. ಕಳೆದ ವರ್ಷ 1,056 ಮಂದಿ ಹೆಲಿಕಾಪ್ಟರ್ ನಲ್ಲಿ ಹಂಪಿ ನೋಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.