ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ತಿಪ್ಪಾಪುರ ಗ್ರಾಮದಲ್ಲಿ ತಾಯಿ ಮತ್ತು ಇಬ್ಬರು ಪುತ್ರಿಯರ ಮೃತದೇಹ ಶನಿವಾರ ಮಧ್ಯಾಹ್ನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
‘ತಿಪ್ಪಾಪುರದ ದಬ್ಬಗಡಿ ಬಸವರಾಜ ಅವರ ಪತ್ನಿ ಶಿವಮ್ಮ (24), ಮಕ್ಕಳಾದ ದುರುಗಮ್ಮ (3), ಈಶ್ವರಿ (10 ತಿಂಗಳು) ಮೃತರು. ಐದು ವರ್ಷಗಳ ಹಿಂದೆ ಇವರು ಪ್ರೀತಿಸಿ ಮದುವೆಯಾಗಿದ್ದರು. ವರದಕ್ಷಿಣೆ ಕಿರುಕುಳದಿಂದ ಈ ಸಾವು ಸಂಭವಿಸಿದೆ’ ಎಂದು ಶಿವಮ್ಮ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.