ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಸತತವಾಗಿ ಹೆಚ್ಚಳವಾಗುತ್ತಲೇ ಇದೆ. ಈ ವಾರವೂ ಪೆಟ್ರೋಲ್ ದರದಲ್ಲಿ ಹೆಚ್ಚಿನ ಏರಿಕೆಯಾದರೆ, ಡೀಸೆಲ್ ಬೆಲೆ ಕೆಲ ಪೈಸೆ ಹೆಚ್ಚಳವಾಗಿದೆ.
ಜಿಲ್ಲೆಯಲ್ಲಿ ಹೋದ ವಾರ (ಜು.11) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹105.55 ಇತ್ತು. ಈ ವಾರ ₹106.52ಕ್ಕೆ ಏರಿಕೆಯಾಗಿದ್ದು, ಒಟ್ಟು 97 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್ ದರ ₹96.40 ಇತ್ತು. ಈ ವಾರ ₹96.44 ಆಗಿದ್ದು, 4 ಪೈಸೆ ಏರಿಕೆ ಕಂಡಿದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ– ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್ಗೆ) ಜು.11 ಜು.18 ಜು.11 ಜು.18 ಎಚ್.ಪಿ. 105.52 106.50 96.15 96.42 ಐ.ಒ.ಸಿ. 105.51 106.47 96.40 96.40 ಬಿ.ಪಿ. 105.55 106.52 96.22 96.44