ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪಾಕ್ಷ–ಪಾಂಪಾಂಬಿಕೆ ನಿಶ್ಚಿತಾರ್ಥ ಸಂಪನ್ನ

ಆಕರ್ಷಕ ಧಾರ್ಮಿಕ ವಿಧಿಗಳಿಗೆ ಮಧ್ಯರಾತ್ರಿ ಸಾಕ್ಷಿಯಾದ ಸಾವಿರಾರು ಭಕ್ತರು
Published 29 ಡಿಸೆಂಬರ್ 2023, 14:30 IST
Last Updated 29 ಡಿಸೆಂಬರ್ 2023, 14:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕಾದೇವಿಯರ (ಗಿರಿಜೆ) ವಿವಾಹ ನಿಶ್ಚಿತಾರ್ಥ ‘ಫಲಪೂಜಾ’ ರೂಪದಲ್ಲಿ ಗುರುವಾರ ಮಧ್ಯರಾತ್ರಿ ಹಂಪಿಯ ಕೋದಂಡರಾಮ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

ಸಾವಿರಾರು ಭಕ್ತರು ಪಾಲ್ಗೊಂಡಿದ್ದ ಈ ಧಾರ್ಮಿಕ ವಿಧಿವಿಧಾನದಲ್ಲಿ ವರನ ಕಡೆಯಿಂದ ವಿರೂಪಾಕ್ಷ ದೇವಸ್ಥಾನದ ಅರ್ಚಕರು ಹಾಗೂ ವಧುವಿನ ಕಡೆಯಿಂದ ಕೋದಂಡರಾಮ ದೇವಸ್ಥಾನದ ಅರ್ಚಕರು ಪಾಲ್ಗೊಂಡು ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಈ ನಿಶ್ಚಿತಾರ್ಥಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಹಂಪಿಯ ಪುಷ್ಕರಿಣಿಯಲ್ಲಿ ಪಂಪಾಪತಿ–ಗಿರಿಜೆಯರ ತೆಪ್ಪೋತ್ಸವ ನಡೆದಿತ್ತು. ಹಿಂದೂ ಕುಟುಂಬಗಳಲ್ಲಿ ಇರುವ ವಿವಾಹ ನಿಶ್ಚಿತಾರ್ಥ ಕ್ರಮದಲ್ಲೇ ಇಲ್ಲೂ ದೇವರಿಗೆ ನಿಶ್ಚಿತಾರ್ಥವನ್ನು ಹಲವು ಧಾರ್ಮಿಕ ವಿಧಿವಿಧಾನಗಳು, ಹೋಮಗಳ ಮೂಲಕ ನೆರವೇರಿಸಲಾಯಿತು.

ಏ.21ರಂದು ವಿವಾಹ: ಚೈತ್ರ ಮಾಸ ಶುಕ್ಲಪಕ್ಷ ತ್ರಯೋದಶಿಯ ದಿನ ಅಂದರೆ ಮುಂದಿನ ಏಪ್ರಿಲ್‌ 21ರಂದು ವಿರೂಪಾಕ್ಷ ದೇವಸ್ಥಾನದಲ್ಲಿ ಗಿರಿಜಾ ಕಲ್ಯಾಣ ನಡೆಯಲಿದ್ದು, ಮರುದಿನ ಕಡುವಿನ ಕಾಳಗ ನಡೆಯಲಿದೆ. ವಿವಾಹದ ಎರಡನೇ ದಿನ ಅಂದರೆ ಚೈತ್ರ ಶುದ್ಧ ಪೌರ್ಣಿಮೆಯ ದಿನ (ಏಪ್ರಿಲ್‌ 23) ನವದಂಪತಿಯ ಮೆರವಣಿಗೆ ರೂಪದಲ್ಲಿ ಜೋಡಿ ರಥೋತ್ಸವ ನಡೆಯಲಿದೆ.

ವರ ಮತ್ತು ವಧುವಿನ ಕಡೆಯ ಅರ್ಚಕರು ದೇವರ ವಿವಾಹ ನಿಶ್ಚಿತಾರ್ಥ ನಡೆಸಿಕೊಟ್ಟರು  –ಪ್ರಜಾವಾಣಿ ಚಿತ್ರ
ವರ ಮತ್ತು ವಧುವಿನ ಕಡೆಯ ಅರ್ಚಕರು ದೇವರ ವಿವಾಹ ನಿಶ್ಚಿತಾರ್ಥ ನಡೆಸಿಕೊಟ್ಟರು  –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT