ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೋರ್ಟ್‌ ಖರ್ಚಿಗೆ ಕದ್ದರು 25 ಬೈಕ್‌

ನಾಲ್ವರು ಹೊಸಪೇಟೆ, ಒಬ್ಬನಿಗೆ ಕೊಪ್ಪಳದಲ್ಲಿ ನ್ಯಾಯಾಂಗ ಬಂಧನ
Last Updated 3 ಸೆಪ್ಟೆಂಬರ್ 2021, 16:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೊಲೆ, ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು ನ್ಯಾಯಾಲಯದ ಖರ್ಚು ನಿಭಾಯಿಸಲು ಕದ್ದಿದ್ದ ಬರೋಬ್ಬರಿ 25 ಬೈಕ್‌ಗಳೊಂದಿಗೆ ನಾಲ್ವರನ್ನು ಇಲ್ಲಿನ ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಬೈಕ್‌ ಕಳವು ಮಾಡಿರುವ ಆರೋಪಿಗಳ ಪೈಕಿ ನಾಲ್ವರನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದರೆ, ಇನ್ನೊಬ್ಬನನ್ನು ಕೊಪ್ಪಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಒಂದು ಮತ್ತು ಎರಡನೇ ಆರೋಪಿ, ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಕೋರ್ಟ್‌ ಖರ್ಚು ನಿಭಾಯಿಸಲು ಬೈಕ್‌ ಕಳ್ಳತನ ಮಾಡುತ್ತಿದ್ದರು. ಆ 29ರಂದು ನಗರದ ಕನಕದಾಸ ವೃತ್ತದಲ್ಲಿ ಶೋಧ ನಡೆಸುತ್ತಿರುವ ವೇಳೆ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕಮಲಾಪುರ, ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಜನನಿಬಿಡ ಪ್ರದೇಶಗಳಿಂದ ನಕಲಿ ಕೀ ಬಳಸಿ ಬೈಕ್‌ ಕಳವು ಮಾಡಿ, ಕಡಿಮೆ ಬೆಲೆಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಒಂದನೇ ಆರೋಪಿ ಹಾಗೂ ಬೈಕ್‌ ಖರೀದಿಸಿದ 2,4,5ನೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎರಡನೇ ಆರೋಪಿ ಕೊಪ್ಪಳದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಎಸ್ಪಿ ಎನ್‌. ಲಾವಣ್ಯ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ.ಶ್ರೀನಿವಾಸ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಬಿ.ಕುಮಾರ್, ಎಎಸ್ಐ ಕೋದಂಡಪಾಣಿ ಹಾಗೂ ಕಾನ್‌ಸ್ಟೆಬಲ್‌ಗಳಾದ ಶ್ರೀರಾಮ ರೆಡ್ಡಿ, ಶ್ರೀನಿವಾಸ್, ಫಣಿರಾಜ್, ತಿಮ್ಮಪ್ಪ, ಅಡಿವೆಪ್ಪ, ಗಾಳೆಪ್ಪ, ಲಿಂಗರಾಜ್, ಮಲಕಜಪ್ಪ ಹಾಗೂ ಯಮನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT