ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮನವಿ

Published 12 ಜುಲೈ 2023, 14:52 IST
Last Updated 12 ಜುಲೈ 2023, 14:52 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ತಿ.ನರಸಿಪುರದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ ನಾಯಕ್ ಹಾಗೂ ಜೈನ ಮುನಿ ಹತ್ಯೆ ಖಂಡಿಸಿ ಇಲ್ಲಿನ ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜರ್ ಅವರಿಗೆ ವಿವಿಧ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದರು.

ಹಿರೇಕುಂಬಳಗುಂಟೆಯ ನಾಗರಾಜ್ ಗೌಡ ಮಾತನಾಡಿ, ತಿ.ನರಸಿಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಅವರ ಹತ್ಯೆ ಹಾಗೂ ಜೈನಮುನಿಗಳ ಹತ್ಯೆ ಸೇರಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳ ಕಡಿವಾಣ ಬೀಳಬೇಕಿದೆ. ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮೃತರ ಕುಟುಂಬಗಳಿಗೂ ಹಾಗೂ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ ಎಂದರು.

ಸುಭಾಷ್ ಚಂದ್ರ, ಕೊಲಮೆಹಟ್ಟಿ ವೆಂಕಟೇಶ್, ನಾಗೇಂದ್ರ ಸ್ಮಾಟಿ, ದಯಾನಂದ ಸಜ್ಜನ್, ವಿಶ್ವನಾಥ ಕೆ.ಎಸ್, ಹನುಮಜ್ಜರ್ ನಾಗೇಶ್, ಕೆಂಚನಲ್ಲನಹಳ್ಳಿ ಬಸವರಾಜ್, ವಿನೋದ್, ಕೆ.ಎಸ್.ಬಸವರಾಜ ವಿ, ಪೋಟೊ ನಾಗರಾಜ, ವಿರೇಶ್.ಕೆ, ಬಸವರಾಜ್, ಗುರುಮೂರ್ತಿ, ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT