ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಜನನ, ಮರಣ ಪ್ರಮಾಣ ಪತ್ರ ನೋಂದಣಿ ಮಾಡಿಸಿ: ತಹಶೀಲ್ದಾರ್‌

Last Updated 11 ಅಕ್ಟೋಬರ್ 2021, 16:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬೆಂಕಿ ಅವಘಡದಲ್ಲಿ ತಾಲ್ಲೂಕು ಕಚೇರಿಯ ಸಾಂಖ್ಯಿಕ ವಿಭಾಗದಲ್ಲಿನ ಜನನ–ಮರಣ ಪ್ರಮಾಣ ಪತ್ರಗಳ ದಾಖಲೆಗಳು ಸುಟ್ಟು ಹೋಗಿದ್ದು, ಅವುಗಳ ನಕಲು ಪ್ರತಿ ಹೊಂದಿದವರು ಪೂರಕ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಿ, ಅದರ ಸಂಖ್ಯೆಯನ್ನು ನೋಂದಣಿ ಮಾಡಿ ಸಹಕರಿಸಬೇಕು’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಮನವಿ ಮಾಡಿದ್ದಾರೆ.

‘2020ರ ಮೇ 2ರಂದು ಬೆಂಕಿ ಅವಘಡದಲ್ಲಿ ಬಹುತೇಕ ದಾಖಲೆಗಳು ಸುಟ್ಟು ಹೋಗಿವೆ. ಗ್ರಾಮೀಣ ಪ್ರದೇಶದವರಿಗೆ ವಿತರಿಸಲಾಗಿರುವ ಜನನ–ಮರಣ ಪ್ರಮಾಣ ಪತ್ರಗಳಿಗೆ ಸಂಬಂಧಿಸಿ ಕಚೇರಿಯ ದಾಖಲೆ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಾರ್ವಜನಿಕರು ನಕಲು ಪ್ರತಿಯೊಂದಿಗೆ ಬಂದು, ಅದರ ಮೇಲಿನ ಸಂಖ್ಯೆ ನೋಂದಣಿ ಮಾಡಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT