ಹೊಸಪೇಟೆ (ವಿಜಯನಗರ): ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲು ನಿರಾಕರಿಸಿದ ಇಬ್ಬರು ಶಾಲಾ ಶಿಕ್ಷಕಿಯರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಆದೇಶ ಹೊರಡಿಸಿದ್ದಾರೆ.

ಗುಡೇಗೋಟೆ ಹೋಬಳಿಯ ಮತಗಟ್ಟೆ ಸಂಖ್ಯೆ 119ರ ಮತಗಟ್ಟೆ ಬಿಎಲ್‌ಒ ಆಗಿ ನೇಮಕವಾಗಿದ್ದ ಸಿದ್ದಾಪುರ ವಡ್ಡರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುನಂದಾ ನ್ಯಾಮತಿ ಹಾಗೂ ಮತಗಟ್ಟೆ 120ರ ಮತಗಟ್ಟೆ ಬಿಎಲ್‌ಒ ಆಗಿ ನೇಮಕವಾಗಿದ್ದ ಗುಂಡುಮಣುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮಮತಾ ಅಮಾನತುಗೊಂಡವರು.

ಈ ಇಬ್ಬರೂ ಶಿಕ್ಷಕಿಯರನ್ನು ವರ್ಗಾವಣೆಗೊಂಡ ಇತರ ಇಬ್ಬರು ಶಿಕ್ಷಕರ ಜಾಗದಲ್ಲಿ ಬಿಎಲ್ಒ ಆಗಿ ನಿಯುಕ್ತಿಗೊಳಿಸಿ ಆದೇಶ ನೀಡಲಾಗಿತ್ತು. ಆದರೆ ಆದೇಶವನ್ನು ಸ್ವೀಕರಿಸಲು ನಿರಾಕರಿಸಿದ್ದಲ್ಲದೆ, ನೀಡಲಾದ ನೋಟಿಸ್‌ಗೆ ಸಹ ಉತ್ತರ ಕೊಟ್ಟಿಲ್ಲ. ಹೀಗಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.